ಕಸ ವಿಲೇವಾರಿಗೆ ಮೀನಾಮೇಷ: ಆಯುಕ್ತರ ಮನೆ ಮುಂದೆಯೇ ಕಸ ಸುರಿದು ಶಾಸಕನ ಆಕ್ರೋಶ - ಬೆಳಗಾವಿ ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ
🎬 Watch Now: Feature Video
ಅಯ್ಯೋ ಅವರು ಹೇಳಿಕೇಳಿ ಮಹಾನಗರ ಪಾಲಿಕೆ ಆಯುಕ್ತರು, ಅವರ ಮನೆಯ ಮುಂದೆಯೇ ಈ ಪರಿ ಕಸವಾ ಎಂದು ಅಚ್ಚರಿ ಆಯ್ತಾ?. ಹೌದು, ನಗರದಲ್ಲಿ ಕಸ ವಿಲೇವಾರಿ ಸರಿಯಾಗಿ ಆಗದ ಹಿನ್ನೆಲೆಯಲ್ಲಿ ಜನಪ್ರತಿನಿಧಿಯೇ ಆಕ್ರೋಶಗೊಂಡು ಅಧಿಕಾರಿಗೆ ಕಲಿಸಿದ ಪಾಠ ಇದು. ಶಾಸಕ ಅಭಯ್ ಪಾಟೀಲ್ ಆಯುಕ್ತರ ಮನೆ ಮುಂದೆಯೇ ಕಸ ಸುರಿದು ಪ್ರತಿಭಟಿಸಿದರು. ಬೆಳಗಾವಿ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ ಎಂದು ಶಾಸಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಕಸ ವಿಲೇವಾರಿ ಸಂಬಂಧ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗದೆ ಬೇಸತ್ತು ಈ ನಿರ್ಧಾರ ಮಾಡಿದ್ದಾರಂತೆ. ಕ್ಷೇತ್ರದಲ್ಲಿ ವಿಲೇವಾರಿಯಾಗದೆ ಇದ್ದ ಕಸವನ್ನು ಟ್ರ್ಯಾಕ್ಟರ್ನಲ್ಲುತುಂಬಿಸಿ ತಾವೇ ಸ್ವತಃ ಚಾಲನೆ ಮಾಡಿಕೊಂಡು ಬಂದು, ಪಾಲಿಕೆ ಆಯುಕ್ತ ಜಗದೀಶ್ ಕೆ.ಹೆಚ್ ನಿವಾಸದೆದುರೇ ಸುರಿದು ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಕಸವನ್ನು ಮಹಾನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದು, ಮುಂದೆ ಈ ಸಮಸ್ಯೆ ಬಗೆಹರಿಯದಿದ್ದರೆ ಪ್ರತೀ ಭಾನುವಾರ ಕಸ ಸುರಿಯುವುದಾಗಿ ಎಚ್ಚರಿಸಿದ್ದಾರೆ.