ಸ್ಪೋಟ್ಸ್ ಪಾರ್ಕ್ನಲ್ಲಿ ಮಿಂಚಿದ ಶಾಸಕ ಅಬ್ಬಯ್ಯ ಪ್ರಸಾದ್ - MLA Abbayya Prasad visits sports park
🎬 Watch Now: Feature Video
ಹುಬ್ಬಳ್ಳಿ ನಗರದ ಸ್ಪೋರ್ಟ್ ಪಾರ್ಕ್ಗೆ ಭೇಟಿ ನೀಡಿದ ಶಾಸಕ ಪ್ರಸಾದ್ ಅಬ್ಬಯ್ಯ ಸ್ನೂಕರ್ ಗೇಮ್ ಹಾಗೂ ವಾಹನ ಚಲಾಯಿಸುವ ಮೂಲಕ ಸಂತಸಪಟ್ಟರು. ಪಾರ್ಕ್ನ ವಿಶಾಲ ಜಾಗದಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣದಲ್ಲಿ ಟರ್ಫ್ ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್, ಕಬಡ್ಡಿ, ಟ್ರ್ಯಾಂಪೋಲಿನ್ ಪಾರ್ಕ್, ಸೋಪ್ ಫುಟ್ಬಾಲ್, ಜಾರ್ಬಿಂಗ್ ಬಾಲ್, ಸ್ನೂಕರ್, ಟೇಬಲ್ ಟೆನ್ನಿಸ್, ಕೇರಂ, ಎಟಿವಿ ಬೈಕ್ ಮೈದಾನಗಳಿವೆ. ಸುಮಾರು 25 ರಿಂದ 30 ಆಟಗಳಿದ್ದು, ಎಲ್ಲ ವಯೋಮಾನದವರು ಭಾಗವಹಿಸಬಹುದಾಗಿದೆ.