ಮೆಜೆಸ್ಟಿಕ್ನಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಇಳಿಮುಖ - ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಇಳಿಮುಖ
🎬 Watch Now: Feature Video
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಇಳಿಮುಖವಾಗಿದ್ದು, ಬಹುತೇಕ ಕಾರ್ಮಿಕರನ್ನು ಕೆಎಸ್ಆರ್ಟಿಸಿ ಕಳುಹಿಸಿಕೊಟ್ಟಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳು, ತಾಲೂಕು ಕೇಂದ್ರಗಳಿಗೆ ಬಸ್ ವ್ಯವಸ್ಥೆ ಮಾಡಿದ್ದ ಸರ್ಕಾರ, 4 ದಿನದಿಂದ 2,796 ಬಸ್ ಸಂಚಾರ ಮಾಡಿತ್ತು. ಕಾರ್ಮಿಕರು, ವಿದ್ಯಾರ್ಥಿಗಳು ಸೇರಿ 83,880 ಪ್ರಯಾಣಿಕರು ಪ್ರಯಾಣ ಮಾಡಿದ್ದರು. ನಿನ್ನೆ 800 ಬಸ್ಗಳು ಸಂಚಾರ ನಡೆಸಿದ್ದು, 24 ಸಾವಿರ ಜನರು ಪ್ರಯಾಣ ಮಾಡಿದ್ದಾರೆ, ಇಂದು ಕಡಿಮೆ ಪ್ರಮಾಣದ ಕಾರ್ಮಿಕರಿದ್ದರೂ ಎಂದಿನಂತೆ ಬಸ್ ವ್ಯವಸ್ಥೆ ಇದೆ. ಗುಂಪು ಗುಂಪಾಗಿ ಬರ್ತಿದ್ದ ಕಾರ್ಮಿಕರು ಇಂದು ಒಬ್ಬೊಬ್ಬರಾಗಿ ಆಗಮಿಸುತ್ತಿದ್ದಾರೆ.