ಮಣ್ಣೂರ ಯಲ್ಲಮ್ಮ ದೇಗುಲ ಜಲಾವೃತ: ವಿಡಿಯೋ - Water release from Sonna Barrage
🎬 Watch Now: Feature Video

ಕಲಬುರಗಿ: ಸೊನ್ನ ಬ್ಯಾರೇಜ್ನಿಂದ ಭೀಮಾ ನದಿಗೆ 7.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನಿನ್ನೆಯವರೆಗೆ 6.30 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಇದೀಗ ಮಹಾರಾಷ್ಟ್ರದ ಉಜನಿ ಹಾಗೂ ವೀರ್ ಜಲಾಶಯದಿಂದ ಹೆಚ್ಚಿನ ನೀರು ಸೊನ್ನ ಬ್ಯಾರೇಜ್‌ಗೆ ಹರಿದು ಬರುತ್ತಿದ್ದು, ನದಿ ತಟದ ನೂರಾರು ಗ್ರಾಮಗಳಲ್ಲಿ ಪ್ರವಾಹವುಂಟಾಗಿದೆ. ಅಫಜಲಪೂರ ತಾಲೂಕಿನ ಹತ್ತಾರು ಹಳ್ಳಿಗಳು ಜಲಾವೃತಗೊಂಡಿವೆ. ಅಲ್ಲದೇ ಮಣ್ಣೂರ ಯಲ್ಲಮ್ಮ ದೇವಸ್ಥಾನವೂ ಜಲಾವೃತವಾಗಿದೆ.