ಕಾಫಿನಾಡು ಚಿಕ್ಕಮಗಳೂರಲ್ಲಿ ಚಿರತೆ ಪ್ರತ್ಯಕ್ಷ...ಆತಂಕದಲ್ಲಿ ಗ್ರಾಮಸ್ಥರು - chikmagaloreleopardnews
🎬 Watch Now: Feature Video
ಚಿಕ್ಕಮಗಳೂರು ಜಿಲ್ಲೆಯ ಬಯಲು ಸೀಮೆ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಗ್ರಾಮದೊಳಗೆ ಚಿರತೆ ಪ್ರವೇಶವಾಗಿದ್ದು, ಸ್ಥಳೀಯ ಜನರನ್ನು ಈ ಚಿರತೆ ಬೆಚ್ಚಿ ಬೀಳಿಸಿದೆ. ಕಡೂರು ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಶಿವಕುಮಾರ್ ಎಂಬುವವರ ತೆಂಗಿನ ಶೆಡ್ನಲ್ಲಿ ಚಿರತೆ ಅಡಗಿ ಕುಳಿತಿದೆ. ಕಳೆದ ಒಂದು ವಾರದ ಹಿಂದೇ ಬಾಣಾವರ, ರಂಗಾಪುರ, ಮತ್ತಿಹಳ್ಳಿ ಗ್ರಾಮದ ಸುತ್ತ ಮುತ್ತಲಿನಲ್ಲಿ ಈ ಚಿರತೆ ಕಾಣಿಸಿಕೊಂಡಿತ್ತು. ಪದೇ ಪದೆ ಈ ಚಿರತೆ ಪ್ರತ್ಯಕ್ಷವಾಗಿ ವಾಹನ ಸವಾರರಿಗೆ ಮತ್ತು ಸ್ಥಳೀಯ ಜನರಿಗೆ ಆತಂಕ ಹುಟ್ಟಿಸಿತ್ತು. ಈ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಜ್ಜಾಗಿದ್ದು, ಬಲೆ ಹಾಕಿ ಚಿರತೆಗಾಗಿ ಕಾಯುತ್ತಿದ್ದಾರೆ. ಅರವಳಿಗೆ ತಜ್ಞರು ಕೂಡ ಸ್ಥಳಕ್ಕೇ ಆಗಮಿಸಿದ್ದು ಶಿವಮೊಗ್ಗ ಜಿಲ್ಲೆಯಿಂದ ವಿಶೇಷ ತಂಡ ಚಿರತೆ ಸೆರೆ ಹಿಡಿಯಲು ಸ್ಥಳಕ್ಕಾಮಿಸಿದೆ. ಸ್ಥಳೀಯರು,ಪೊಲೀಸರು ಸಹ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ.