ವ್ಯಾದಿ ಬೂದಿಯಾದೀತಲೇ ಪರಾಕ್‌.. ಗೊರವಯ್ಯನ ಭವಿಷ್ಯ ನಿಜವಾಗ್ತಿದೆಯೇ!? - Festival at Deva Gudda in Haveri District

🎬 Watch Now: Feature Video

thumbnail

By

Published : Nov 10, 2020, 10:52 PM IST

ಹಾವೇರಿ : ರಾಣೆಬೆನ್ನೂರ ತಾಲೂಕಿನ ದೇವರಗುಡ್ಡದಲ್ಲಿ ಪ್ರತಿವರ್ಷ ದಸರೆಯ ವಿಜಯದಶಮಿಯಂದು ಕಾರ್ಣಿಕೋತ್ಸವ ನಡೆಯುತ್ತದೆ. ಇಲ್ಲಿ ಗೊರವಯ್ಯ 9 ದಿನಗಳ ಕಾಲ ಉಪವಾಸವಿದ್ದು ಕಾರ್ಣಿಕ ನುಡಿಯುವುದು ವಿಶೇಷ. ನೂರಾರು ವರ್ಷಗಳಿಂದ ಕಾರ್ಣಿಕ ನುಡಿಯುವ ಪರಂಪರೆ ಬೆಳೆದು ಬಂದಿದೆ. ಪ್ರತಿ ವರ್ಷದ ವಿದ್ಯಮಾನಗಳಿಗೆ ಈ ಕಾರ್ಣಿಕ ತಾಳೆ ಹಾಕಲಾಗುತ್ತೆ. ಕಳೆದ ವರ್ಷ ಗೊರವಪ್ಪ ಘಟಸರ್ಪ ಕಂಗಾಲಾದೀತಲೇ ಪರಾಕ್ ಎಂದು ನುಡಿದಿದ್ದ. ಅದರಂತೆ ಮಾನವ ಸಂಕುಲ ಕೊರೊನಾದಿಂದ ಕಂಗಾಲಾಗಿತ್ತು. ಈ ವರ್ಷ ವ್ಯಾದಿ ಬೂದಿಯಾದೀತಲೇ, ಸೃಷ್ಠಿ ಸಿರಿಯಾದೀತಲೇ ಪರಾಕ್ ಎಂದು ಗೊರವಪ್ಪ ಕಾರ್ಣಿಕ ನುಡಿದಿದ್ದ. ಹೀಗಾಗಿ, ಕೊರೊನಾ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಅಂತಿದ್ದಾರೆ ಶ್ರೀಕ್ಷೇತ್ರದಲ್ಲಿರುವ ಅರ್ಚಕರು..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.