ಅರಬ್​ ನಾಡಿನಲ್ಲಿ ಅರಳಿದ ಕನ್ನಡಾಭಿಮಾನ: ಮಕ್ಕಳಿಂದ ಕನ್ನಡ ರಾಜ್ಯೋತ್ಸವಕ್ಕೆ ನುಡಿ‌ನಮನ - ಅರಬ್ಬ ನಾಡಿನಲ್ಲಿ ಅರಳಿದ ಕನ್ನಡಾಭಿಮಾನ

🎬 Watch Now: Feature Video

thumbnail

By

Published : Nov 1, 2020, 10:07 AM IST

ಓಮನ್ ನಲ್ಲಿ ನೆಲೆಸಿರುವ ಕನ್ನಡದ ಮಕ್ಕಳಿಂದ ಕನ್ನಡ ರಾಜ್ಯೋತ್ಸವಕ್ಕೆ ನುಡಿ‌ನಮನ ಸಲ್ಲಿಸಿದ್ದಾರೆ. ಈ ಹಾಡಿಗೆ ಜೋಗಿ ಸಿನಿಮಾ ಖ್ಯಾತಿಯ ಗಾಯಕಿ ಸುನೀತ ಮುರಳಿ ಮೊದಲ ಬಾರಿಗೆ ಸಂಗೀತ ಸಂಯೋಜಿಸಿದ್ದಾರೆ. ಸರಿಗಮಪ‌ ಖ್ಯಾತಿಯ ಕೀ ಬೋರ್ಡ್ ಸ್ಪೆಷಲಿಸ್ಟ್ ಆಕಾಶ್ ಪರ್ವ ಸಹಕಾರ ನೀಡಿದ್ದು, ಮೈಸೂರಿನ ಪುಟಾಣಿ ಅನನ್ಯ ಪ್ರಸಾದ್ ಈ ಹಾಡಿನಲ್ಲಿ ಭಾಗವಹಿಸಿದ್ದು, ಅನುಪಮಾ ಪ್ರಸಾದ್ ಕಾರ್ಯಕ್ರಮ ಸಂಯೋಜಿಸಿದ್ದಾರೆ. ವಿಶೇಷವೆಂದರೆ ಅರಬ್​ ನೆಲದಲ್ಲಿ ಕನ್ನಡದ ಮಕ್ಕಳು ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ತಮ್ಮ ತಮ್ಮ ಮನೆಗಳಿಂದಲೇ ತಮ್ಮ ಹಾಡನ್ನು ಹಾಡಿದ್ದಾರೆ. ವಿದೇಶದಲ್ಲಿದ್ದರೂ ಕನ್ನಡವನ್ನು ಮರೆಯದೇ ಹಾಡಿನ ಮೂಲಕ ಕನ್ನಡ ಪ್ರೀತಿ ‌ಮೆರೆದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.