ಪೌರ ಕಾರ್ಮಿಕರನ್ನು ಕೊರೊನಾದಿಂದ ರಕ್ಷಿಸಲು ಕಲಬುರಗಿ ಜಿಲ್ಲಾಡಳಿತದ ಮೆಗಾ ಪ್ಲಾನ್ - sodium hipocloride
🎬 Watch Now: Feature Video
ಕಲಬುರಗಿ: ಕೊರೊನಾ ತಡೆಗೆ ಕಲಬುರಗಿಯಲ್ಲಿ ವ್ಯಾಪಕ ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿನ ಮಹಾನಗರ ಪಾಲಿಕೆ ತನ್ನ ಪೌರಕಾರ್ಮಿಕರ ಸುರಕ್ಷತೆಗೆ ಹೊಸ ಹೆಜ್ಜೆ ಇಟ್ಟಿದೆ. ನಗರದ ಟೌನ್ಹಾಲ್ ಬಳಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸಿಬ್ಬಂದಿಯ ಮೇಲೆ ಸೋಡಿಯಂ ಹೈಪೋ ಕ್ಲೋರೈಡ್ ದ್ರಾವಣವನ್ನು ಸಿಂಪಡಣೆ ಮಾಡಲಾಗುತ್ತಿದೆ. ಟೌನ್ಹಾಲ್ ಮುಂಭಾಗ ಸುರಂಗ ನಿರ್ಮಿಸಿ ಈ ದ್ರಾವಣ ಸಿಂಪಡಿಸಲಾಗುತ್ತಿದೆ. ಪೌರಕಾರ್ಮಿಕರು ತಮ್ಮ ಕೆಲಸಗಳಿಗೆ ಮೊದಲು ಹಾಗೂ ಕೆಲಸದ ನಂತರ ಈ ಸುರಂಗದ ಮೂಲಕ ಹಾದು ವೈರಸ್ ಹರಡದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಲಾಗಿದೆ.