ಫೆ.9ರಂದು ಚಾಮರಾಜನಗರದಲ್ಲಿ ಉದ್ಯೋಗ ಮೇಳ - ಉದ್ಯೋಗ ಮೇಳ
🎬 Watch Now: Feature Video
ಚಾಮರಾಜನಗರ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕೈಗಾರಿಕೆ ತರಬೇತಿ ಸಂಸ್ಥೆ ಹಾಗೂ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಚಾಮರಾಜನಗರದ ಪೇಟೆ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಫೆ.9ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿ ಡಾ.ಎಂ.ಆರ್.ರವಿ ತಿಳಿಸಿದರು. ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಈ ಮೇಳದಲ್ಲಿ ಮೈಸೂರು, ನಂಜನಗೂಡು, ಬೆಂಗಳೂರಿನ ಪ್ರತಿಷ್ಠಿತ ಸುಮಾರು 20–25 ಕಂಪೆನಿ ಹಾಗೂ ಸೇವಾ ಸಂಸ್ಥೆಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು. 7ನೇ ತರಗತಿಯಿಂದ ಪದವಿವರೆಗೆ ಓದಿರುವ ನಿರುದ್ಯೋಗಿಗಳಿಗೆ ಸಂದರ್ಶನ ನಡೆಸಿ ಸ್ಥಳದಲ್ಲೇ ನೇಮಕಾತಿ ಆದೇಶ ಕೊಡುವ ಸಾಧ್ಯತೆಯಿದೆ.