ಜನತಾ ಕರ್ಫ್ಯೂ ಹಿನ್ನೆಲೆ, ನಾಳೆ ಎಲ್ಲ ಖಾಸಗಿ ಓಪಿಡಿ ಸೇವೆ ಬಂದ್... - all private OPD services remains shut tomorrow
🎬 Watch Now: Feature Video
ಬೆಂಗಳೂರು: ಜನತಾ ಕರ್ಫ್ಯೂಗೆ ಭಾರತೀಯ ವೈದ್ಯಕೀಯ ಸಂಘ ಬೆಂಬಲ ನೀಡಿದ್ದು, ನಾಳೆ ಒಂದು ದಿನ ಓಪಿಡಿ ಸೇವೆ ಸ್ಥಗಿತಗೊಳಿಸಲು ನಿರ್ಧಾರಿಸಲಾಗಿದೆ. ನಾಳೆ ಬೆಳಗ್ಗೆ 7 ರಿಂದ ಇಡೀ ದಿನ ಓಪಿಡಿ ಸೇವೆ ಸ್ಥಗಿತಗೊಳಿಸಲು ತೀರ್ಮಾನ ಮಾಡಿದ್ದು, ಪ್ರಧಾನಿಯವರ ಈ ಕರೆ ಅತ್ಯುತ್ತಮವಾದ ನಿರ್ಧಾರವೆಂದು ಸ್ವಾಗತಿಸಿದ್ದಾರೆ. ಐಎಂರ ಅಡಿ ಬರುವ 177 ಆಸ್ಪತ್ರೆಗಳಲ್ಲಿ ನಾಳೆ ಓಪಿಡಿ ಸೇವೆ ಇರೋದಿಲ್ಲ. ಲಸಿಕೆ ಕಾರ್ಯಕ್ರಮ ಕೂಡ ಮುಂದೂಡಲಾಗಿದೆ. ಕೇವಲ ತುರ್ತು ಪರಿಸ್ಥಿತಿಗೆ ಮಾತ್ರ ಚಿಕಿತ್ಸೆ ಲಭ್ಯವಿರುತ್ತದೆ. ಕೆಲ ಯೋಜಿತ ಸರ್ಜರಿಗಳನ್ನು ಮುಂದೂಡಲು ತೀರ್ಮಾನಿಸಿದ್ದೇವೆ ಎಂದು ಈಟಿವಿ ಭಾರತದೊಂದಿಗೆ ಭಾರತೀಯ ವೈದ್ಯಕೀಯ ಸಂಘದ ಜನರಲ್ ಸೆಕ್ರೆಟರಿ ಡಾ. ಶ್ರೀನಿವಾಸ್ ಹೇಳಿದ್ದಾರೆ.