ಮುದ್ದೇಬಿಹಾಳ: ಮಹಿಳೆಯರಿಂದಲೇ ರಂಗೇರಿದ ಹೋಳಿ ಹಬ್ಬ - ಮುದ್ದೇಬಿಹಾಳ
🎬 Watch Now: Feature Video
ಮುದ್ದೇಬಿಹಾಳ: ಕೊರೊನಾ ಹಾವಳಿಯ ಮಧ್ಯೆ ತಾಲೂಕಿನ ನಾಲತವಾಡದಲ್ಲಿ ರತಿಮನ್ಮಥರ ವೇಷಧಾರಿಗಳ ಮೆರವಣಿಗೆ ಗಮನ ಸೆಳೆಯಿತು. ಮಹಿಳೆಯರೇ ಹೆಚ್ಚಾಗಿ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ರತಿ-ಮನ್ಮಥರ ಸೋಗಿನ ಮೆರವಣಿಗೆ ಹಾಗೂ ದ್ಯಾಮವ್ವನ ಕಟ್ಟೆಯ ಬಳಿ ಬಣ್ಣ ತುಂಬಿದ ಮಡಿಕೆ ಒಡೆಯುವ ಸ್ಪರ್ಧೆಗಳು ನಡೆಯಲಿಲ್ಲ. ಉಳಿದಂತೆ ಪಟ್ಟಣದ ಮಾರುತಿ ನಗರ, ಪುರಾತನ ಜೈನ ಬಸದಿ ಓಣಿ, ವಿದ್ಯಾನಗರ, ಸಾಯಿ ನಗರ, ಮಹಾಂತೇಶ ನಗರ, ಪಿಲೆಕೆಮ್ಮ ನಗರ, ಬಸವನಗರ, ಸಂಗಮೇಶ್ವರ ನಗರ, ಗಣೇಶ ನಗರ, ಹುಡ್ಕೋ ಕಾಲನಿ, ವೀರೇಶ್ವರ ನಗರ ಸೇರಿದಂತೆ ಹಲವೆಡೆ ಯುವಕರು ಬಣ್ಣ ಎರಚಿ ಸಂಭ್ರಮಿಸಿದರು. ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಸ್ವತಂತ್ರ ಯೋಗ ಸಮಿತಿ ಪದಾಧಿಕಾರಿಗಳೊಂದಿಗೆ ಜಿ.ಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರ ಪತ್ನಿ ರೂಪಾ ದೇಸಾಯಿ ಬಣ್ಣ ಹಚ್ಚಿ ಸಂಭ್ರಮಿಸಿದರು.