ನಿಗದಿತ ಸಮಯದಲ್ಲೇ ಬಿಬಿಎಂಪಿ ಚುನಾವಣೆ ನಡೆಯಬೇಕು: ಹೈಕೋರ್ಟ್ ಸೂಚನೆ - bengalore news
🎬 Watch Now: Feature Video
ಬಿಬಿಎಂಪಿ ಪ್ರಸಕ್ತ ಪಾಲಿಕೆ ಸದಸ್ಯರ ಅಧಿಕಾರಾವಧಿ ಕೇವಲ ಆರು ತಿಂಗಳು ಮಾತ್ರ ಬಾಕಿ ಉಳಿದಿದ್ದು, ನಿಗದಿತ ಸಮಯದಲ್ಲಿ ಪಾಲಿಕೆ ಚುನಾವಣೆ ನಡೆಯಬೇಕು ಎಂದು ಪಾಲಿಕೆ ಕಾಂಗ್ರೆಸ್ ಸದಸ್ಯ ಎಂ. ಶಿವರಾಜ್ ಕೋರ್ಟ್ ಮೊರೆ ಹೋಗಿದ್ದರು. ಇಂದು ಈ ಅರ್ಜಿ ವಿಚಾರಣೆಯನ್ನು ನಡೆಸಿದ ಕೋರ್ಟ್, ಸರ್ಕಾರಕ್ಕೆ ನಿಗದಿತ ಸಮಯದಲ್ಲೇ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ. ಅಲ್ಲದೆ, ಮಂಗಳವಾರ ಮಧ್ಯಾಹ್ನದ ಒಳಗೆ ವಾರ್ಡ್ ಮರುವಿಂಗಡನೆ ಹಾಗೂ ಮೀಸಲಾತಿಯ ಬಗ್ಗೆ ವಿವರ ನೀಡಬೇಕೆಂದು ನಿರ್ದೇಶಿಸಿದೆ.