ETV Bharat / state

'ಮಲ್ಲಿಕಾರ್ಜುನ್​ ಏನೆಂದು ಜನರಿಗೆ ಗೊತ್ತಿದೆ': ಶಾಸಕ ಶಿವಗಂಗಾಗೆ ಸಂಸದೆ ಪ್ರಭಾ ತಿರುಗೇಟು - MP PRABHA MALLIKARJUN

ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಮೇಲೆ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಅವರು ಮಾಡಿದ್ದ ಆರೋಪಗಳ ಕುರಿತಂತೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ.

S S MALLIKARJUN  DAVANAGERE  CHANNAGIRI MLA BASAVARAJ SHIVAGANGA  ಪ್ರಭಾ ಮಲ್ಲಿಕಾರ್ಜುನ್ MP PRABHA MALLIKARJUN
ಬಸವರಾಜ್ ಶಿವಗಂಗಾ, ಪ್ರಭಾ ಮಲ್ಲಿಕಾರ್ಜುನ್ (ETV Bharat)
author img

By ETV Bharat Karnataka Team

Published : 11 hours ago

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಬದಲಾವಣೆ ಮಾಡಬೇಕು ಎಂಬ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಅವರ ಹೇಳಿಕೆಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ತಿರುಗೇಟು ನೀಡಿದ್ಧಾರೆ.

ದಾವಣಗೆರೆಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ''ಮಾತನಾಡುವವರು ಯಾವ ಉದ್ದೇಶ ಇಟ್ಟುಕೊಂಡು ದೊಡಸ್ಥಿಕೆಗೆ ಮಾತನಾಡುತ್ತಾರೆೆ ಅಂತ ಜನ ನೋಡುತ್ತಿದ್ದಾರೆ. ಅವರಿಗೇ ಗೊತ್ತಿದೆ ಯಾಕೆ ಮಾತನಾಡಿದ್ದಾರೆ ಅಂತ'' ಎಂದರು.

''ನಾವು ನೋಡಿರುವಂತೆ ಮಲ್ಲಣ್ಣ (ಮಲ್ಲಿಕಾರ್ಜುನ) ಅಭಿವೃದ್ಧಿಯ ಹರಿಕಾರ. ಕಳೆದ 12 ವರ್ಷಗಳಿಂದ ಅದನ್ನು ನೀವು ನೋಡಿದ್ದೀರಿ. ಜಿಲ್ಲೆಯಲ್ಲಿ ಯಾವುದೇ ಕೋಮು ಸಂಘರ್ಷ ಆಗದಂತೆ ನೋಡಿಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅವರೇ ಮುತುವರ್ಜಿ ವಹಿಸಿ ಎಷ್ಟೊಂದು ಕೆಲಸ ಮಾಡಿದ್ದಾರೆಂದು ನೋಡಿದ್ದೇವೆ. ಇಂತವರ ಬಗ್ಗೆ ಮಾತನಾಡಲು ಯಾವ ಹಕ್ಕಿದೆ ಎಂಬುದನ್ನು ಕೇಳಬೇಕಾಗಿದೆ. ಮಲ್ಲಿಕಾರ್ಜುನ್ ಏನು ಅಂತ ನಮಗೆ ಗೊತ್ತು'' ಎಂದು ಪತಿ ಮಲ್ಲಿಕಾರ್ಜುನರನ್ನು ಸಮರ್ಥಿಸಿಕೊಂಡರು.

ಪ್ರಭಾ ಮಲ್ಲಿಕಾರ್ಜುನ್ (ETV Bharat)

''ಯಾರು ಆರೋಪ ಮಾಡಿದ್ದಾರೆ, ಅವರ ಉದ್ದೇಶ ಏನು ಅಂತ ತಿಳಿದುಕೊಳ್ಳಬೇಕು. ರಾಜಕೀಯ ಅಂದರೆ ಎಲ್ಲರೂ ವಿರೋಧಿಗಳು ಇರುತ್ತಾರೆ. ಅಧಿಕಾರ ಇರಲಿ, ಬಿಡಲಿ ಜನಸೇವೆ ಮಾಡಬೇಕು ಎಂಬುದು ಮಲ್ಲಿಕಾರ್ಜುನ ಅವರ ಅಜೆಂಡಾ. ಅದನ್ನು ಬೇರೆಯವರಿಂದ ಕಲಿಯಬೇಕಿಲ್ಲ'' ಎಂದು ಶಾಸಕ ಬಸವರಾಜ್ ಶಿವಗಂಗಾಗೆ ಪ್ರಭಾ ಮಲ್ಲಿಕಾರ್ಜುನ್ ಟಾಂಗ್ ನೀಡಿದರು.

''ಇದರ ಬಗ್ಗೆ ಜನ ಚರ್ಚೆ ಮಾಡುತ್ತಿದ್ದಾರೆ, ಮಾಡಲಿ. ಅವರಿಗೆ ಏನು ಬೇಕೋ ಅದನ್ನು ಹೇಳಲಿ. ಮಲ್ಲಿಕಾರ್ಜುನ್​ ಏನು ಮಾಡಿದ್ದಾರೆ ಅಂತ ಜನರೇ ಉತ್ತರ ಕೊಡುತ್ತಾರೆ. ನಮಗೆ ಕೆಲಸ ಮಾಡುವುದಕ್ಕೇ ಸಮಯ ಸಿಗುತ್ತಿಲ್ಲ. ಯಾರೋ ಮಾತನಾಡಿದ್ದಕ್ಕೆ ನಾವು ಉತ್ತರ ಕೊಡುವುದು ಸರಿಯಲ್ಲ'' ಎಂದು ಹೇಳಿದರು.

ಶಾಸಕ ಬಸವರಾಜ ಶಿವಗಂಗಾ ಆರೋಪಗಳೇನು?: ಇತ್ತೀಚೆಗೆ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಶಾಸಕ ಬಸವರಾಜ ಶಿವಗಂಗಾ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಎಸ್.ಮಲ್ಲಿಕಾರ್ಜುನ್ ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ನಾನೇ ಬರೆದಿದ್ದೇನೆ ಎಂದು ಹೇಳಿದ್ದರು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ನಾನು‌ ಪತ್ರ ಬರೆದಿದ್ದು ಸತ್ಯ. ಅದನ್ನು ನಾನೇ ಬರೆದಿದ್ದೇನೆ. ಮಲ್ಲಿಕಾರ್ಜುನ್ ಅವರು ಬಿಜೆಪಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ ನಮಗೆ ಹೊಂದಾಣಿಕೆ ರಾಜಕಾರಣ ಬರುವುದಿಲ್ಲ" ಎಂದು ಕಿಡಿಕಾರಿದ್ದರು.

"ಬೇಕಾದರೆ ಇವತ್ತೇ ನನ್ನ ರಾಜಕೀಯ ಹೋಗಲಿ, ಇಂಥ ರಾಜಕೀಯ ನನಗೆ ಬೇಡ. ಈ ವಿಷಯವಾಗಿ ಸಚಿವರ ಜೊತೆಗೆ ಮಾತನಾಡಲಾಗಿದೆ. ಶಾಂತನಗೌಡರ ಮಗ ಡಿಸಿಸಿ ಬ್ಯಾಂಕ್ ನಿರ್ದೇಶಕರಿದ್ದಾರೆ. ಆತನನ್ನು ಅಫೆಕ್ಸ್ ಬ್ಯಾಂಕ್ ನಿರ್ದೇಶಕನನ್ನಾಗಿ ಮಾಡಬಹುದಿತ್ತು. ಇವರಿಗೆ ತಮ್ಮ ಮನೆಯ ಬೇಳೆಕಾಳು ಮಾತ್ರ ಬೇಯಬೇಕು. ಯಾವ ಪಕ್ಷವೂ ಬೇಕಿಲ್ಲ ಯಾವ ಶಾಸಕರ ಅವಶ್ಯಕತೆ ಇಲ್ಲ" ಎಂದು ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ಸಿಎಂ, ಡಿಸಿಎಂಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡಬೇಕೆಂದು ಪತ್ರ ಬರೆದಿದ್ದು ಸತ್ಯ : ಶಾಸಕ ಶಿವಗಂಗಾ - MLA BASAVARAJ SHIVAGANGA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.