ETV Bharat / technology

ನ್ಯೂಇಯರ್​ಗಾಗಿ ಉತ್ತಮ​ ರೀಚಾರ್ಜ್​ ಪ್ಲಾನ್​ ಹುಡುಕುತ್ತಿದ್ದೀರಾ?: ಇಲ್ಲಿವೆ 500 ರೂ.ಗೆ ಬೆಸ್ಟ್​ ಪ್ಯಾಕೇಜ್! - TOP 5 PREPAID PLANS INDIA

Best Prepaid Plans for New Year: ಇನ್ನೇನು ಹೊಸ ವರ್ಷ ಬಂದೇ ಬಿಡ್ತು. ಈ ಹೊಸ ವರ್ಷಕ್ಕೆ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಅನೇಕ ಆಫರ್​ಗಳು ನೀಡುತ್ತಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

PREPAID PLANS FOR NEW YEAR  BEST PREPAID PLANS FOR NEW YEAR  AFFORDABLE PREPAID PLANS  BEST RECHARGE UNDER RS 500
ಉತ್ತಮ​ ರೀಚಾರ್ಜ್​ ಪ್ಲಾನ್ (ETV Bharat File Photo)
author img

By ETV Bharat Tech Team

Published : 12 hours ago

Best Prepaid Plans for New Year: ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈಗ ಕೆಲ ಕಂಪನಿಗಳು ಈ ಹೊಸ ವರ್ಷಕ್ಕೆ ಗ್ರಾಹಕರನ್ನು ತನ್ನತ್ತ ಸೆಳೆಯಲು ಕೈಗೆಟುಕುವ ದರದಲ್ಲಿ ರೀಚಾರ್ಜ್​ ಪ್ಲಾನ್​ಗಳ ಆಫರ್​ ನೀಡುತ್ತಿವೆ. ಅವುಗಳ ಬಗ್ಗೆ ವಿವರವಾಗಿ ಅರಿತುಕೊಳ್ಳೋಣ

ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ನಿಮ್ಮ ಪ್ರಿಪೇಯ್ಡ್ ಮೊಬೈಲ್‌ಗಾಗಿ ಉತ್ತಮ ಪ್ಲಾನ್​ಗಳನ್ನು ಆಯ್ಕೆ ಮಾಡಲು ಇದೀಗ ಉತ್ತಮ ಸಮಯ. ಏಕೆಂದರೆ ಹೊಸ ವರ್ಷದ ಹಿನ್ನೆಲೆಯಲ್ಲಿ ಬಹುತೇಕ ಟೆಲಿಕಾಂ ಕಂಪನಿಗಳು ಬೆಸ್ಟ್​ ಆಫರ್‌ಗಳೊಂದಿಗೆ ಹೊಸ ಪ್ಲಾನ್​ಗಳನ್ನು ಪ್ರಸ್ತುತ ಪಡಿಸುತ್ತಿವೆ. ಅವುಗಳಲ್ಲಿ ರೂ.500 ಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಅತ್ಯುತ್ತಮ ರೀಚಾರ್ಜ್ ಯೋಜನೆಗಳು ಸಹ ಒಳಗೊಂಡಿದೆ.

BSNL ರೂ. 485 ಪ್ಲಾನ್​: ಲಾಂಗ್​ ವ್ಯಾಲಿಡಿಟಿ ಮತ್ತು ಡೈಲಿ ಬೆನಿಫಿಟ್ಸ್​

  • ವಾಯ್ಸ್​ ಕಾಲ್ಸ್​: ಅನಿಯಮಿತ ಸ್ಥಳೀಯ ಮತ್ತು STD ಕರೆಗಳು
  • ಡೇಟಾ: ದಿನಕ್ಕೆ 1.5GB (ಮಿತಿಯನ್ನು ಮೀರಿದ ನಂತರ ಸ್ಪೀಡ್​ 40 Kbps ಗೆ ಕಡಿಮೆಯಾಗುತ್ತದೆ)
  • SMS: ದಿನಕ್ಕೆ 100 SMS
  • ವ್ಯಾಲಿಡಿಟಿ: 82 ದಿನಗಳು

ಹೆಚ್ಚುವರಿ ಪ್ರಯೋಜನಗಳು: ಉಚಿತ ಕಾಲರ್ ಟ್ಯೂನ್ಸ್​ ಲಭ್ಯವಿದೆ. ಈ ಬಿಎಸ್​ಎನ್​ಎಲ್​ ಯೋಜನೆಯು ಆಗಾಗ್ಗೆ ರೀಚಾರ್ಜ್ ಮಾಡದೆಯೇ ದೀರ್ಘಕಾಲದವರೆಗೆ ಸ್ಥಿರ ಡೇಟಾ ಮತ್ತು ಕರೆ ಸೇವೆಗಳ ಅಗತ್ಯವಿರುವ ಬಳಕೆದಾರರಿಗೆ ಉತ್ತಮವಾಗಿದೆ.

ಏರ್‌ಟೆಲ್ ರೂ.379 ರೀಚಾರ್ಜ್ ಪ್ಯಾಕ್: ಅನ್​ಲಿಮಿಟೆಡ್​ 5G ಜೊತೆಗೆ ಹೈ-ಸ್ಪೀಡ್ ಡೇಟಾ

  • ಹೆಚ್ಚಿನ ವೇಗದ ಡೇಟಾ ಬಯಸುವವರಿಗೆ ಈ ಏರ್‌ಟೆಲ್ ರೂ. 379 ಪ್ರಿಪೇಯ್ಡ್ ಪ್ಯಾಕ್ ಅತ್ಯುತ್ತಮ ಆಯ್ಕೆಯಾಗಿದೆ.

  • ಡೇಟಾ: ದಿನಕ್ಕೆ 2GB + ಅನ್​ಲಿಮಿಟೆಡ್​ 5G ಡೇಟಾ (ಮಿತಿಯನ್ನು ಮೀರಿದ ನಂತರ ವೇಗವನ್ನು 64 Kbps ಗೆ ಕಡಿಮೆಗೊಳಿಸಲಾಗುತ್ತದೆ)
  • SMS: ದಿನಕ್ಕೆ 100 SMS
  • ವ್ಯಾಲಿಡಿಟಿ: 1 ತಿಂಗಳು

ಹೆಚ್ಚುವರಿ ಪ್ರಯೋಜನಗಳು: ಉಚಿತ ಕಾಲರ್ ಟ್ಯೂನ್ಸ್​ ಲಭ್ಯವಿದೆ. ಈ ಯೋಜನೆಯು ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ನೀಡುತ್ತದೆ. ಕೆಲಸ ಅಥವಾ ಮನರಂಜನೆಗಾಗಿ ಮೊಬೈಲ್ ಡೇಟಾವನ್ನು ಬಳಸುವವರಿಗೆ ಇದು ಉಪಯುಕ್ತವಾಗಿದೆ.

ವೊಡಾಫೋನ್-ಐಡಿಯಾ ರೂ 365 ಪ್ಯಾಕ್: ಫ್ಲೆಕ್ಸಿಬುಲ್​ ಡೇಟಾ ಮತ್ತು ನೈಟ್​ ಬೆನಿಫಿಟ್ಸ್​

  • ವೊಡಾಫೋನ್ ಐಡಿಯಾ ಈ ರೂ. 365 ಪ್ಲಾನ್​ ಬಳಕೆದಾರರಿಗೆ ಹೆಚ್ಚುವರಿ ಅನುಕೂಲತೆ, ಬೋನಸ್ ಡೇಟಾವನ್ನು ನೀಡುತ್ತದೆ.

  • ಡೇಟಾ: ದಿನಕ್ಕೆ 2GB (ಮಿತಿಯನ್ನು ಮೀರಿದ ನಂತರ ವೇಗವು 64 Kbps ಗೆ ಕಡಿಮೆಯಾಗುತ್ತದೆ)
  • SMS: ದಿನಕ್ಕೆ 100 SMS
  • ವ್ಯಾಲಿಡಿಟಿ: 28 ದಿನಗಳು

ಹೆಚ್ಚುವರಿ ಪ್ರಯೋಜನಗಳು: ಮಧ್ಯರಾತ್ರಿ 12 ನಿಂದ ಬೆಳಗ್ಗೆ 6 ಗಂಟೆಯವರೆಗೆ ಅನ್​ಲಿಮಿಟೆಡ್​ ಡೇಟಾ, ವಾರದ ದಿನಗಳಲ್ಲಿ ಬಳಕೆಯಾಗದ ಡೇಟಾಕ್ಕಾಗಿ ವಾರಾಂತ್ಯದ ರೋಲ್‌ಓವರ್, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ತಿಂಗಳಿಗೆ 2GB ಬ್ಯಾಕಪ್ ಡೇಟಾ ಒಳಗೊಂಡಿದೆ. ರಾತ್ರಿ ಸಮಯದ ಡೇಟಾ ಬಳಕೆದಾರರಿಗೆ ಈ ಯೋಜನೆಯು ಪರಿಪೂರ್ಣವಾಗಿದೆ.

ಜಿಯೋ ರೂ.449 ಪ್ಯಾಕ್:

  • ಪ್ರಯಾಣದಲ್ಲಿರುವಾಗ ಹೆಚ್ಚಿನ ಡೇಟಾ ಬಳಕೆ ಮತ್ತು ಮನರಂಜನೆಯನ್ನು ಬಯಸುವವರಿಗೆ ಜಿಯೋ ರೂ.449 ಯೋಜನೆಯನ್ನು ತರಲಾಗಿದೆ.

  • ಡೇಟಾ: ದಿನಕ್ಕೆ 3GB (ಮಿತಿಯನ್ನು ಮೀರಿದ ನಂತರ ವೇಗವು 64 Kbps ಗೆ ಕಡಿಮೆಯಾಗುತ್ತದೆ)
  • SMS: ದಿನಕ್ಕೆ 100 SMS
  • ವ್ಯಾಲಿಡಿಟಿ: 28 ದಿನಗಳು

ಹೆಚ್ಚುವರಿ ಪ್ರಯೋಜನಗಳು: JioTV, JioCinema, JioCloud ಗೆ ಪ್ರವೇಶದೊಂದಿಗೆ Jio 5G ಕವರೇಜ್ ಪ್ರದೇಶಗಳಲ್ಲಿ ಅನಿಯಮಿತ 5G ಡೇಟಾ. ಆಗಾಗ್ಗೆ ವಿಡಿಯೋಗಳನ್ನು ಸ್ಟ್ರೀಮ್ ಮಾಡುವವರಿಗೆ, ಆನ್‌ಲೈನ್ ಆಟಗಳನ್ನು ಆಡುವ ಅಥವಾ ವಿಡಿಯೋ ಕರೆಗಳಲ್ಲಿ ಭಾಗವಹಿಸುವವರಿಗೆ ಈ ರೀಚಾರ್ಜ್ ಪ್ಲಾನ್ ಒಳ್ಳೆಯದು. ಇದರ ಹೊರತಾಗಿ, ಜಿಯೋ ನೆಟ್‌ವರ್ಕ್ ಮತ್ತು ಮನರಂಜನಾ ಕೊಡುಗೆಗಳನ್ನು ಹೆಚ್ಚು ಮಾಡಲು ಈ ಯೋಜನೆ ಸೂಕ್ತವಾಗಿದೆ.

ಏರ್‌ಟೆಲ್ ರೂ.398 ಪ್ಯಾಕ್: ಕ್ರೀಡಾ ಪ್ರೇಮಿಗಳು ಈ ಪ್ಲಾನ್​ ಅನ್ನು ಇಷ್ಟಪಡುತ್ತಾರೆ. ಏರ್‌ಟೆಲ್ ಈ ರೂ.398 ಪ್ಲಾನ್​ನಲ್ಲಿ ಅನೇಕ ಆಫರ್​ಗಳನ್ನು ನೀಡಿದೆ. ಸಾಕಷ್ಟು ಡೇಟಾ ಪ್ರಯೋಜನಗಳೊಂದಿಗೆ Disney+ Hotstar ಗೆ ಚಂದಾದಾರಿಕೆಯನ್ನು ಒಳಗೊಂಡಿದೆ. ಕ್ರೀಡಾ ಪ್ರೇಮಿಗಳಿಗೆ ಹಾಗೂ ಪ್ರೀಮಿಯಂ ವಿಷಯವನ್ನು ಹೆಚ್ಚಾಗಿ ವೀಕ್ಷಿಸುವವರಿಗೆ ಇದು ತುಂಬಾ ಉಪಯುಕ್ತವಾಗಿದೆ.

ಹೆಚ್ಚುವರಿ ಪ್ರಯೋಜನಗಳು: Disney+ Hotstar ಗೆ 28-ದಿನ ಸಬ್​ಸ್ಕ್ರಿಪ್ಷನ್​ ಒಳಗೊಂಡಿದೆ. ಕ್ರೀಡಾ ಲೈವ್ ಸ್ಟ್ರೀಮ್ ಪ್ರಿಯರಿಗೆ ಮತ್ತು ಡೇಟಾ ಮಿತಿಗಳ ಬಗ್ಗೆ ಚಿಂತಿಸದೆ ಇತರ ಪ್ರೀಮಿಯಂ ವಿಷಯವನ್ನು ವೀಕ್ಷಿಸಲು ಬಯಸುವವರಿಗೆ ಈ ಯೋಜನೆ ಉತ್ತಮವಾಗಿದೆ.

ಓದಿ: SMS​ - ಕರೆ ಪ್ಲಾನ್​ಗಳನ್ನು ಸಹ ನೀಡಿ: ಟೆಲಿಕಾಂ ಕಂಪನಿಗಳಿಗೆ ಟ್ರಾಯ್​ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.