ಜಗದ್ವಿಖ್ಯಾತ ದಸರೆಗೆ ಭರದ ಸಿದ್ದತೆ; ಫಿರಂಗಿ ಶಬ್ಧಕ್ಕೆ ಬೆದರಿದ ಆನೆಗಳು, ವಿಡಿಯೋ - ಧನಂಜಯ ಆನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4431634-thumbnail-3x2-mys.jpg)
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಭರದ ಸಿದ್ದತೆ ನಡೆಯುತ್ತಿದೆ. ಇಂದು ಕೋಟೆ ಮಾರಮ್ಮ ದೇವಾಲಯದ ಮುಂಭಾಗದಲ್ಲಿ ಫಿರಂಗಿಯಿಂದ ಮದ್ದುಗುಂಡು ಸಿಡಿಸುವ ತಾಲೀಮಿನಲ್ಲಿ 11 ಆನೆಗಳು, 25 ಆಶ್ವದಳ ಭಾಗವಹಿಸಿದ್ದವು. ಮೊದಲ ಮದ್ದುಗುಂಡು ತಾಲೀಮಿನಲ್ಲಿ ಜೋರಾಗಿ ಕೇಳಿಬಂದ ಶಬ್ಧಕ್ಕೆ ಚೊಚ್ಚಲ ಬಾರಿಗೆ ಜಂಬೂಸವಾರಿಗೆ ಬಂದಿರುವ ಈಶ್ವರ, ಲಕ್ಷ್ಮೀ, ಜಯಪ್ರಕಾಶ ಆನೆಗಳು ಸ್ವಲ್ಪ ಬೆದರಿದವು. ಆದರೆ ಕಳೆದ 2 ವರ್ಷಗಳಿಂದ ದಸರಾದಲ್ಲಿ ಭಾಗವಹಿಸಿದ್ದ ಧನಂಜಯ ಆನೆ ಫಿರಂಗಿಯ ಮದ್ದುಗುಂಡಿನ ಶಬ್ಧಕ್ಕೆ ಹೆದರಿ ಓಡಿ ಹೋಗಲು ಯತ್ನಿಸಿತ್ತು.ಅದರ ಕಾಲಿಗೆ ಸರಪಳಿ ಕಟ್ಟಿದ್ದ ಪರಿಣಾಮ ಆನೆಯನ್ನು ಮಾವುತರು ನಿಯಂತ್ರಿಸಿದರು.