ಬಳ್ಳಾರಿ ಸಂಚಾರಿ ಪೊಲೀಸರಿಂದ ಹೆಲ್ಮೆಟ್ ಜಾಗೃತಿ - ಬಳ್ಳಾರಿ ಸಂಚಾರಿ ಪೊಲೀಸ್ ಹೆಲ್ಮೆಟ್ ಜಾಗೃತಿ ಜಾಥಾ
🎬 Watch Now: Feature Video
ಗಣಿನಾಡು ಬಳ್ಳಾರಿಯಲ್ಲಿ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಡಿ.ಎ.ಆರ್ ಮೈದಾನದಿಂದ ಹೆಲ್ಮೆಟ್ ಜಾಗೃತಿ ಜಾಥಾಕ್ಕೆ ಎಸ್ಪಿ ಸಿ.ಕೆ.ಬಾಬಾ ಚಾಲನೆ ನೀಡಿದರು. ನಗರದ ಸಂಗಮ್ ವೃತ್ತದಿಂದ ಪ್ರಾರಂಭವಾದ ಜಾಥಾ ರಾಯಲ್ ವೃತ್ತ, ಜೈನ್ ಮಾರ್ಕೆಟ್, ಮೋತಿ ವೃತ್ತ, ಎಸ್.ಪಿ.ಸರ್ಕಲ್, ದುರ್ಗಮ್ಮ ಗುಡಿ ಮಾರ್ಗವಾಗಿ ಡಿ.ಎ.ಆರ್ ಮೈದಾನ ತಲುಪಿತು. ಈ ಸಂದರ್ಭದಲ್ಲಿ ಸಂಚಾರಿ ಮತ್ತು ನಾಗರೀಕ ಪೊಲೀಸ್ ಠಾಣೆಯ ಸಿಬ್ಬಂದಿ, ರಾಯಲ್ ಎನ್‌ಫೀಲ್ಡ್ ಬೈಕ್ ಸದಸ್ಯರು, ರೆಡ್‌ಕ್ರಾಸ್ ಸಂಸ್ಥೆ ಸದಸ್ಯರು, ಗೃಹ ರಕ್ಷಕದಳ ಸಿಬ್ಬಂದಿ, ಸನ್ಮಾರ್ಗ ಗೆಳೆಯ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.