ಮತ್ತೆ ಅಬ್ಬರಿಸಿದ ಮಳೆರಾಯ: ಕೊಪ್ಪಳದಲ್ಲಿ ತಡರಾತ್ರಿಯಿಂದ ವರ್ಷಧಾರೆ - North Karnataka Rain News
🎬 Watch Now: Feature Video

ಕೊಪ್ಪಳ: ಕಳೆದ ನಾಲ್ಕೈದು ದಿನಗಳಿಂದ ವಿರಾಮ ನೀಡಿದ್ದ ಮಳೆರಾಯ ಇದೀಗ ಮತ್ತೆ ಅಬ್ಬರಿಸಲು ಆರಂಭಿಸಿದ್ದಾನೆ. ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಧ್ಯರಾತ್ರಿಯಿಂದ ವ್ಯಾಪಕ ಮಳೆಯಾಗಿದೆ. ಹೀಗಾಗಿ ಜಿಲ್ಲೆಯ ಹಲವು ಕಡೆ ಹಳ್ಳ-ಕೊಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಜಿಲ್ಲೆಯ ಇಂದರಗಿ, ಜಬ್ಬಲಗುಡ್ಡ, ಮುಕ್ಕುಂಪಿ, ನಾಗೇಶನಹಳ್ಳಿ, ಹಳೆ ಕುಮಟಾ, ಹೇಮಗುಡ್ಡ ಸೇರಿದಂತೆ ಅನೇಕ ಕಡೆ ಧಾರಾಕಾರ ಮಳೆ ಸುರಿದಿದೆ. ನಾಲ್ಕೈದು ದಿನಗಳ ನಂತರ ಮತ್ತೆ ಜಿಲ್ಲೆಯಲ್ಲಿ ಮಳೆ ಪ್ರಾರಂಭವಾಗಿರೋದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.