ಕೊರೊನಾ ಪತ್ತೆ.... ಸೀಲ್ಡೌನ್ ಪ್ರದೇಶಕ್ಕೆ ಹಾವೇರಿ ಡಿಸಿ ಭೇಟಿ, ಪರಿಶೀಲನೆ - ಹಾವೇರಿಯಲ್ಲಿ ಕೊರೊನಾ ಪತ್ತೆ
🎬 Watch Now: Feature Video
ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾದ ಸೀಲ್ಡೌನ್ ಪ್ರದೇಶಕ್ಕೆ ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಹಾವೇರಿ ಎಸ್ಪಿ ಕೆ.ಜಿ.ದೇವರಾಜ್ ಹಾಗೂ ಎಡಿಸಿ ಯೋಗೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಗಳ ಭೇಟಿ ವೇಳೆ ಸ್ಥಳೀಯರು ಹಾಲು ನೀರಿನ ಕೊರತೆ ಕುರಿತಂತೆ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಎಡಿಸಿ ನೇತೃತ್ವದ ತಂಡ ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿ ಹಾಲು ವಿತರಣೆ ಮಾಡಿದೆ.