ಪರಿಹಾರ ನೀಡುವಂತೆ ಸರ್ಕಾರಕ್ಕೆ ಸಂತ್ರಸ್ತರ ಮನವಿ! - ಸರ್ಕಾರ
🎬 Watch Now: Feature Video
ಯಾದಗಿರಿ ಬಸವಸಾಗರ ಜಲಾಶಯದಲ್ಲಿ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕೃಷ್ಣ ನದಿಗೆ ನೀರು ಹರಿ ಬಿಡಲಾಗಿದೆ. ಜಿಲ್ಲೆಯ ಹುಣಸಗಿ ತಾಲೂಕಿನ ಗೆದ್ದಲಮರಿ ಗ್ರಾಮವು ಸಂಪೂರ್ಣವಾಗಿ ಜಲಾವೃತ್ತವಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಪ್ರವಾಹದಲ್ಲಿ ಸಿಲುಕಿಕೊಂಡ ಸಂತ್ರಸ್ತರು ತಮ್ಮ ಕರುಣಾ ಜನಕ ಕಥೆಯನ್ನು ಹೊರ ಬಿಚ್ಚಿಟ್ಟಿದ್ದು, ತಮ್ಮ ಹೊಲ, ಮನೆ ನೀರಲ್ಲಿ ಕೊಚ್ಚಿ ಹೋಗಿದೆ. ನಮಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಸರ್ಕಾರ ಮೂರು ಹೊತ್ತು ಊಟ ಕೊಟ್ಟರೂ ನಮಗೆ ಪ್ರಯೋಜನವಿಲ್ಲ. ಸರ್ಕಾರ ನಮಗೆ ಹೊಲ, ಮನೆ ಕೊಟ್ಟರೆ ಸಹಾಯವಾಗುತ್ತದೆ. ನಮ್ಮ ಹೊಲದಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹೀಗಾಗಿ ನಮಗೆ ಪರಿಹಾರ ನೀಡಿದ್ರೆ ಸಹಾಯವಾಗುತ್ತೆ ಎಂದು ಸಂತ್ರಸ್ತರು ಸರ್ಕಾರಕ್ಕೆ ಮನವಿ ಮಾಡಿ ಕೊಂಡಿದ್ದಾರೆ.
Last Updated : Aug 15, 2019, 10:15 AM IST