ವಿಜಯಪುರಕ್ಕೂ ಕೊರೊನಾ ಸೋಂಕು.. ಜಿಲ್ಲಾಡಳಿತ ಕಟ್ಟೆಚ್ಚರ!! - ವಿಜಯಪುರದಲ್ಲಿ ವೃದ್ಧೆಗೆ ಕೊರೊನಾ ಸೋಂಕು
🎬 Watch Now: Feature Video
60 ವರ್ಷದ ಮಹಿಳೆಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಬೆನ್ನಲ್ಲೇ ನಗರದ ಜನತೆ ಆತಂಕಕ್ಕೊಳಗಾಗಿದ್ದಾರೆ. ಬಡೆಕಮಾನ್, ಗೋಳಗುಮ್ಮಟ, ಚಪ್ಪರಗಲ್ಲಿ ಸೇರಿ ಹಲವು ಬಡಾವಣೆಗಳನ್ನ ಜಿಲ್ಲಾಡಳಿತ ಈಗಾಗಲೇ ಸೀಲ್ಡೌನ್ ಮಾಡಿದೆ. ಬಡಾವಣೆಗಳ ಒಳ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಸೋಂಕಿತ ಮಹಿಳೆಯ ಸಂಪರ್ಕದಲ್ಲಿದ್ದವರನ್ನ ಆರೋಗ್ಯ ಇಲಾಖೆ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ.