ಕಡೂರಿನಲ್ಲಿ 6.40 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಶಾಸಕ ಬೆಳ್ಳಿ ಪ್ರಕಾಶ್ ಚಾಲನೆ - Drive to road works in Kadur news
🎬 Watch Now: Feature Video
ಚಿಕ್ಕಮಗಳೂರು ಜಿಲ್ಲೆಯ ಕಡೂರು ನಗರದ 21 ವಾರ್ಡ್‌ಗಳಲ್ಲಿ ಸುಮಾರು 6.40 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಶಾಸಕ ಬೆಳ್ಳಿ ಪ್ರಕಾಶ್ ಚಾಲನೆ ನೀಡಿದ್ದು, ನಗರದ ಕೋರ್ಟ್ ಗಣಪತಿ ದೇಗುಲದ ಮುಂದೆ ಭೂಮಿ ಪೂಜೆ ನೆರವೇರಿಸಿದರು. ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲರೂ ಒಮ್ಮತದಿಂದ ಶ್ರಮಿಸಬೇಕಿದ್ದು, ಈ ಕಾಮಗಾರಿಗಳು ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲಿ ನಡೆಯುತ್ತವೆ. ನಾನು ಎಂಬುದಕ್ಕಿಂತ ನಾವು ಎಂಬ ಭಾವನೆಯಿಂದ ಪಕ್ಷಾತೀತವಾಗಿ ಎಲ್ಲಾ ವಾರ್ಡ್‌ಗಳಲ್ಲಿ ಸಮಾನವಾಗಿ ಕಾಮಗಾರಿ ಆರಂಭಿಸಲಾಗಿದೆ ಎಂದು ಹೇಳಿದರು.