ಆಡು ಮರಿಗೆ ಹಾಲುಣಿಸುತ್ತಿರುವ ಶ್ವಾನ... ವಿಡಿಯೋ - Hosapete news
🎬 Watch Now: Feature Video
ಹೊಸಪೇಟೆ: ನಾಯಿ ತನ್ನ ಮರಿಗೆ ಹಾಲುಣಿಸುವುದು ಪ್ರಕೃತಿ ಮಿಯಮ. ಆದರೆ ಹೊಸಪೇಟೆ ತಾಲೂಕಿನ ಪೋತಲಕಟ್ಟೆ ಗ್ರಾಮದಲ್ಲಿ ನಾಯಿಯೊಂದು ಆಡು ಮರಿಗೆ ಹಾಲುಣಿಸುವ ಮೂಲಕ ಅಚ್ಚರಿ ಮೂಡಿಸಿದೆ. ಗ್ರಾಮದ ಮಡಿವಾಳ ದುರಗಪ್ಪ ಎಂಬುವರು 80 ಆಡುಗಳನ್ನು ಸಾಕಿದ್ದಾರೆ. ಈ ಪೈಕಿ 20 ಮರಿಗಳಿದ್ದು, ಅದರಲ್ಲಿ ಒಂದು ಆಡು ಮರಿಗೆ ಶ್ವಾನ ದಿನನಿತ್ಯ ಹಾಲುಣಿಸುವುದು ವಿಶೇಷವಾಗಿದೆ. 20 ದಿನಗಳ ಹಿಂದೆ ಶ್ವಾನ 2 ನಾಯಿ ಮರಿಗಳಿಗೆ ಜನ್ಮ ನೀಡಿದೆ. ಈ ಮರಿಗಳಿಗೆ ಹಾಲುಣಿಸುವುದರ ಜತೆಗೆ ಆಡಿನ ಮರಿಗೂ ಹಾಲುಣಿಸುತ್ತಿದೆ.