ಶಿರಾ ಉಪಕದನ: ಡಿಕೆಶಿಯಿಂದ ಬಿರುಸಿನ ಪ್ರಚಾರ - ತುಮಕೂರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9326979-497-9326979-1603784529944.jpg)
ತುಮಕೂರು: ಶಿರಾ ಉಪಚುನಾವಣೆಯಲ್ಲಿ ಪ್ರಚಾರದ ಕಾವು ರಂಗೇರುತ್ತಿದ್ದು, ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಶಿರಾ ಕಸಬಾ ಹೋಬಳಿಯ ಭೂವನಹಳ್ಳಿ, ಸೋರೆಕುಂಟೆ ಪಂಜಿಗಾನಹಳ್ಳಿ, ದ್ವಾರಳು ಗೇಟ್, ಚನ್ನನಕುಂಟೆ, ಹೊನ್ನಗೊಂಡನಹಳ್ಳಿ, ಮಾಗೋಡುಗೊಲ್ಲರಹಟ್ಟಿ, ಮಾಗೋಡು, ಯರಗುಂಟೆಗೆಟ್, ಗುಳಿಗೇನಹಳ್ಳಿ, ತಗ್ಗಿಹಳ್ಳಿ ಪದ್ಮಾಪುರ, ದೊಡ್ಡಗುಳ ಕಡವಿಗೆರೆ, ಯಲಿಯೂರುಗೇಟ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಪರವಾಗಿ ಮತಯಾಚಿಸಿದರು. ಇದೇ ವೇಳೆ ಕಾಂಗ್ರೆಸ್ ಮುಖಂಡ ಕಲ್ಕೆರೆ ರವಿಕುಮಾರ್ ಸಾಥ್ ನೀಡಿದರು.