ಹೂವು ಕೊಳ್ಳುವ ಗುಂಗಲ್ಲಿ ಕೋವಿಡ್ ನಿಯಮಾವಳಿ ಮರೆತ ಕುಂದಾನಗರಿ ಜನ - belgavi diwali news
🎬 Watch Now: Feature Video

ಬೆಳಗಾವಿ: ದೇಶದೆಲ್ಲೆಡೆ ದೀಪಗಳ ಹಬ್ಬದ ಸಂಭ್ರಮವಿದೆ. ಆದ್ರೆ, ಅಶೋಕ ನಗರದ ಹೂವಿನ ಮಾರುಕಟ್ಟೆ ಹರಾಜು ಕೇಂದ್ರದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಮರೆತು ಹೂವು ಸೇರಿ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಕೈಗೊಂಡು ಎಚ್ಚರಿಕೆ ವಹಿಸುವಂತೆ ಎಷ್ಟೇ ತಿಳಿಸಿದರೂ ಕೂಡ ಸಾರ್ವಜನಿಕರು ಮಾತ್ರ ಡೋಂಟ್ ಕೇರ್. ಹೆಚ್ಚಿನವರು ಸರ್ಕಾರದ ಕೋವಿಡ್ ನಿಯಮಗಳನ್ನು ಪಾಲಿಸದೇ, ಜಿಲ್ಲಾಡಳಿತ ಹೈರಾಣಾಗಿದೆ.