ದಾವಣಗೆರೆ ಸ್ಮಾರ್ಟ್ ಸಿಟಿಯಾಗಲು ವಿದ್ಯಾವಂತರ ಅವಶ್ಯಕತೆಯಿದೆ: ನಾರಾಯಣಸ್ವಾಮಿ - ಲೆಟೆಸ್ಟ್ ದಾವಣಗೆರೆ ಸ್ಮಾರ್ಟ್ ಸಿಟಿ ನ್ಯೂಸ್
🎬 Watch Now: Feature Video
ದಾವಣಗೆರೆ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದು ವಿದ್ಯಾವಂತ ತಿಳುವಳಿಕೆಯುಳ್ಳ ಯುವಕರು ದಾವಣಗೆರೆ ಮಹಾನಗರ ಪಾಲಿಕೆಗೆ ಆಯ್ಕೆಯಾಗಬೇಕೆಂದು ಮಾಜಿ ಸಂಸದ ನಾರಾಯಣಸ್ವಾಮಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣಸ್ವಾಮಿ, ಸಂಸದ ಜಿಎಂ ಸಿದ್ದೇಶ್ವರ್, ಶಾಸಕ ಎಸ್.ಎ ರವೀಂದ್ರನಾಥ್, ಶಿವಯೋಗಸ್ವಾಮಿ, ಯಶವಂತ್ ರಾವ್ ಜಾದವ್ ಎಲ್ಲಾ ಮುಖಂಡರು ಸೇರಿ ಉತ್ತಮ ವ್ಯಕ್ತಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸ್ಮಾರ್ಟ್ ಸಿಟಿ ದಾವಣಗೆರೆಗೆ ಮಾದರಿ ಸ್ಮಾರ್ಟ್ ಕೆಲಸಗಳನ್ನು ನಿರ್ವಹಿಸಲು ವಿದ್ಯಾವಂತ ಯುವಕರು, ಹೊಸಪ್ರತಿಭೆಗಳಿಗೆ ಅವಕಾಶ ಸಿಗಬೇಕಿದೆ. ಇಂಜಿನಿಯರ್ ಪದವಿ ಪಡೆದ ಪ್ರಸನ್ನಕುಮಾರ್ ಅವರನ್ನು 24 ನೇ ವಾರ್ಡ್ ಮತದಾರರು ಗೆಲ್ಲಿಸುವ ಮೂಲಕ ಅವಕಾಶ ಮಾಡಿಕೊಡಬೇಕೆಂದರು.