ಗುಡ್ಡದ ಸಮೀಪದ ಮನೆಗಳಲ್ಲಿ ಮೂಡಿದ ಬಿರುಕು: ಜೀವ ಭಯದಲ್ಲಿ ನಂದೋಡಿ ಗ್ರಾಮಸ್ಥರು - SHIMOGGA news
🎬 Watch Now: Feature Video
ಶಿವಮೊಗ್ಗ: ಕೊಡಗಿನಂತೆ ಜಿಲ್ಲೆಯಲ್ಲೂ ಸಹ ಗುಡ್ಡ ಕುಸಿತವಾಗಿ, ಗುಡ್ಡದ ಬುಡದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಸಾಗರ ತಾಲೂಕು ಶರಾವತಿ ಹಿನ್ನೀರಿನ ನಂದೋಡಿ ಎಂಬ ಪುಟ್ಟ ಗ್ರಾಮದಲ್ಲಿನ ಮಹಾಬಲ ಭಟ್ ಹಾಗೂ ನಾರಾಯಣ ಭಟ್ ಅವರ ಮನೆಗಳು ಕಳೆದ ಒಂದು ವರ್ಷದಿಂದ ಬಿರುಕು ಬಿಡುತ್ತಿವೆ. ಈ ಬಿರುಕು ಹೇಗಿದೆ ಅಂದ್ರೆ, ಮನೆಯ ಗೋಡೆ ಹಾಗೂ ನೆಲವನ್ನು ಸೀಳಿ ಹಾಕಿವೆ. ಇಬ್ಬರಿಗೂ ಸರ್ಕಾರ ಬೇರೆ ಕಡೆ ಮನೆ ನಿರ್ಮಾಣ ಮಾಡಿಕೊಳ್ಳಲು ರಾಜೀವ್ ಗಾಂಧಿ ವಸತಿ ಯೋಜನೆಯಡಿ ಹಣ ಬಿಡುಗಡೆ ಮಾಡಿದೆ. ಆದರೆ ಇವರ ದುರಾದೃಷ್ಟವೆಂಬಂತೆ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಮನೆಯ ನೆಲವೂ ಸಹ ಬಿರುಕು ಬಿಟ್ಟಿದೆ. ಇದರಿಂದ ನಮಗೆ ಮನೆ ನಿರ್ಮಾಣಕ್ಕೆ ಬೇರೆ ಜಾಗದ ಜೊತೆಗೆ ತೋಟಕ್ಕೆ ಪರ್ಯಾಯವಾಗಿ ಜಾಗ ನೀಡಬೇಕು ಎಂದು ಮಹಾಬಲ ಭಟ್ ಅವರ ಕುಟುಂಬ ಆಗ್ರಹಿಸಿದೆ.
Last Updated : Aug 10, 2020, 2:45 PM IST