ಸಿಎಂಗೆ ಸಂಜೆ 4 ಗಂಟೆಯ ಡೆಡ್ಲೈನ್: ಯೋಗೇಶ್ವರ್ ಅಭಿಮಾನಿಯಿಂದ ಬಿಎಸ್ವೈಗೆ ಬಹಿರಂಗ ಎಚ್ಚರಿಕೆ! - ಚಿತ್ರ ನಿರ್ದೇಶಕರಾದ ಚಂದ್ರಶೇಖರ ಮಾವಿನಕುಂಟೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5977117-thumbnail-3x2-bng.jpg)
ದೊಡ್ಡಬಳ್ಳಾಪುರ: ಮಾಜಿ ಸಚಿವರಾದ ಸಿ.ಪಿ. ಯೋಗೇಶ್ವರ್ಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆ ಅವರ ಅಭಿಮಾನಿಯೋರ್ವ ಸಿಎಂಗೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ. ದೊಡ್ಡಬಳ್ಳಾಪುರದ ಚಿತ್ರ ನಿರ್ದೇಶಕ ಚಂದ್ರಶೇಖರ ಮಾವಿನಕುಂಟೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ನಿಕಟವರ್ತಿಯಾಗಿದ್ದಾರೆ. ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯೋಗೇಶ್ವರ್ಗೆ ಸಚಿವ ಸ್ಥಾನ ಕೈತಪ್ಪಿರುವ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಈ ಎಚ್ಚರಿಕೆ ರವಾನಿಸಿದ್ದಾರೆ. ಯಡಿಯೂರಪ್ಪನವರೇ ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವೆ. ಇಂದು ಸಂಜೆ ನಾಲ್ಕು ಗಂಟೆಯೊಳಗೆ ಗುಡ್ ನ್ಯೂಸ್ ಕೊಡ್ಬೇಕು. ಇಲ್ಲವಾದರೆ ನಿಮಗೆ ನಿದ್ದೆ ಮಾಡಲು ಬಿಡದೆ, ನಿಮ್ಮನ್ನು ಕಾಡುತ್ತೇನೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
Last Updated : Feb 6, 2020, 1:43 PM IST