ಕಲ್ಪತರು ನಾಡಿನಲ್ಲಿ ಇಂದು ನಾಲ್ವರಿಗೆ ಸೋಂಕು; 11ಕ್ಕೇರಿದ ಜಿಲ್ಲೆಯ ಸೋಂಕಿತರ ಸಂಖ್ಯೆ - ತುಮಕೂರು ಸುದ್ದಿ
🎬 Watch Now: Feature Video
ತುಮಕೂರು ಜಿಲ್ಲೆಯಲ್ಲಿ ಇಂದು ಒಂದೇ ದಿನ ನಾಲ್ವರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಬೆಂಗಳೂರಿನ ಪಾದರಾಯನಪುರ ಕಂಟೇನ್ಮೆಂಟ್ ಝೋನ್ನಿಂದ ಬಂದಿದ್ದ ಸಿರಾ ಪಟ್ಟಣದ 45 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ಧೃಢವಾಗಿದೆ. ಅವರನ್ನು ರೋಗಿ- 764 ಎಂದು ಗುರುತಿಸಲಾಗಿದೆ. ಅಹಮದಾಬಾದ್ನಿಂದ ಪಾವಗಡಕ್ಕೆ ಬಂದಿದ್ದ 13 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಅವರಲ್ಲಿ ಮೂವರಲ್ಲಿ ಸೋಂಕು ಪತ್ತೆಯಾಗಿದೆ.
Last Updated : May 9, 2020, 8:23 PM IST