ಮಹಿಳೆಗೆ ಕೊರೊನಾ: ತುಮಕೂರು ಜಿಲ್ಲಾ ನ್ಯಾಯಾಲಯ ಸೀಲ್ ಡೌನ್ - ಜಿಲ್ಲಾ ನ್ಯಾಯಾಲಯವನ್ನು ಸಂಪೂರ್ಣ ಸೀಲ್ಡೌನ್
🎬 Watch Now: Feature Video

ತುಮಕೂರು: ಕೊರೊನಾ ಸೋಂಕು ತುಮಕೂರು ಜಿಲ್ಲಾ ನ್ಯಾಯಾಲಯದ ಅಂಗಳಕ್ಕೂ ಪ್ರವೇಶಿಸಿದ್ದು, ಇಲ್ಲಿನ ಮಹಿಳೆಯೊಬ್ಬರಲ್ಲಿ ಸೋಂಕು ದೃಢವಾಗಿದೆ. ಹಾಗಾಗಿ ಜಿಲ್ಲಾ ನ್ಯಾಯಾಲಯವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ನ್ಯಾಯಾಲಯದ ಎಲ್ಲಾ ಕಾರ್ಯ ಕಲಾಪಗಳನ್ನು ರದ್ದುಗೊಳಿಸಲಾಗಿದೆ. ಈವರೆಗೂ ಸುರಕ್ಷತೆಯಿಂದ ಸೀಮಿತ ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗುತ್ತಿತ್ತು. ಸೀಲ್ ಡೌನ್ ಆದ ಹಿನ್ನೆಲೆ ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.