ಕೊರೊನಾ ಎಫೆಕ್ಟ್ ನಿಂದ ನಷ್ಟ: ಈಟಿವಿ ಭಾರತದೊಂದಿಗೆ ಅಭಿಪ್ರಾಯ ಹಂಚಿಕೊಂಡ ಆಟೋ ಚಾಲಕ
🎬 Watch Now: Feature Video
ಬೆಂಗಳೂರು: ಕೊರೊನಾ ವೈರಸ್ ಮಹಾಮಾರಿ ರಾಜ್ಯದಲ್ಲಿ ಮತ್ತಷ್ಟು ಹರಡುವ ಭೀತಿಯಿಂದಾಗಿ ಒಂದೆಡೆ ಕೆಎಸ್ಆರ್ಟಿಸಿ, ನಮ್ಮ ಮೆಟ್ರೋ ಸೇವೆ ಸ್ತಬ್ಧವಾಗಿದೆ. ಮತ್ತೊಂದೆಡೆ ಪ್ರಯಾಣಿಕರ ಅನುಗುಣವಾಗಿ ಬಿಎಂಟಿಸಿ ಶೇ. 20 ರಷ್ಟು ಸಾರಿಗೆ ಸೇವೆ ಒದಗಿಸುತ್ತಿದೆ. ಸಾರಿಗೆ ಸೇವೆ ಅಲಭ್ಯ ಇದ್ದರೂ, ಆಟೋಗಳಿಗೆ ಮಾತ್ರ ಪ್ರಯಾಣಿಕರೇ ಇಲ್ಲ. ಈ ಹಿನ್ನೆಲೆ ನಗರದಲ್ಲಿ ಆಟೋಗಳು ರಸ್ತೆಗೆ ಇಳಿದರೂ ಕೂಡ ಪ್ರಯಾಣಿಕರೇ ಇಲ್ಲದೇ ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಆಟೋ ಚಾಲಕ ಶ್ರೀನಿವಾಸ್ ಈಟಿವಿ ಭಾರತದೊಂದಿಗೆ ತಮ್ಮ ಸಮಸ್ಯೆ ಹಂಚಿಕೊಂಡಿದ್ದಾರೆ.