ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡರ ವಿರುದ್ಧ ಕೈ ಮುಖಂಡರಿಂದ ವಾಗ್ದಾಳಿ - ಶ್ರೀನಿವಾಸಗೌಡ
🎬 Watch Now: Feature Video
ಕೋಲಾರ:ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸುವಂತೆ ಕೋಲಾರ ಶಾಸಕ ಶ್ರೀನಿವಾಸಗೌಡರಿಗೆ ಕಾಂಗ್ರೇಸ್ ಮುಖಂಡರು ಆಗ್ರಹಿಸಿದ್ದಾರೆ. ಇಂದು ಪ್ರತಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು, ಶ್ರೀನಿವಾಸಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಅಷ್ಟೇ ಅಲ್ಲ, ಶ್ರೀನಿವಾಸಗೌಡರು ಅಕ್ರಮ ಆಸ್ತಿ ಬಗ್ಗೆ ಆರೋಪಿಸಿದರು. ಕೆ ಹೆಚ್ ಮುನಿಯಪ್ಪನವರು ಅಕ್ರಮ ಆಸ್ತಿ ಹೊಂದಿದ್ದಾರೆಂದು ಶ್ರೀನಿವಾಸಗೌಡರು ಆರೋಪಿಸ್ತಿದ್ದಾರೆ. ಆದರೆ, ಇದೇ ರೀತಿ ನಿರಾಧಾರವಾಗಿ ಆರೋಪಿಸಿದ್ರೇ ಜೆಡಿಎಸ್ ಎಂಎಲ್‌ಎ ಶ್ರೀನಿವಾಸಗೌಡರ ಅಕ್ರಮ ಆಸ್ತಿ ಬಯಲಿಗೆಳೆಯಬೇಕಾಗುತ್ತೆ ಅಂದರು.