ಸಿಬಿಎಸ್ಸಿ ಫಲಿತಾಂಶ: ಟಾಪರ್ ಗಿರಿಜಾ ಹೆಗಡೆಗೆ ವಿಜ್ಞಾನಿ ಆಗುವ ಗುರಿ - ಸಿಬಿಎಸ್ಸಿ ಫಲಿತಾಂಶ ಪ್ರಕಟ: ರಾಜ್ಯಕ್ಕೆ ಎರಡನೇ ಸ್ಥಾನ ಪಡೆ
🎬 Watch Now: Feature Video

ಧಾರವಾಡ: ಇಂದು ಸಿಬಿಎಸ್ಸಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ಧಾರವಾಡದ ಜೆಎಸ್ಎಸ್ ಸಂಸ್ಥೆಯ ಅಂಗಸಂಸ್ಥೆಯಾದ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ವಿದ್ಯಾರ್ಥಿನಿ ಗಿರಿಜಾ ಹೆಗಡೆ 500 ಅಂಕಗಳಿಗೆ 497 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಈಟಿವಿ ಭಾರತ ಜೊತೆ ಸಂತಸ ಹಂಚಿಕೊಂಡಿರುವ ಅವರು, ವಿಜ್ಞಾನಿ ಆಗುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.