ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಐಟಿ-ಇಡಿ ಇಲಾಖೆಗಳ ಮುಂದುವರೆದ ಭಾಗ: ಸಚಿವ ಸುಧಾಕರ್ - ಕೊಡಗು
🎬 Watch Now: Feature Video
ಮಡಿಕೇರಿ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮನೆ ಮೇಲೆ ನಡೆದಿರುವ ಸಿಬಿಐ ದಾಳಿ ಕುರಿತಂತೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್, ಅದು 2018-19 ರಲ್ಲಿ ಐಟಿ, ಇಡಿ ನಡೆಸಿದ್ದ ದಾಳಿಯ ಮುಂದುವರೆದ ಭಾಗ ಎಂದು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಐಟಿ ಸಲ್ಲಿಸಿರುವ ಚಾರ್ಜ್ ಶೀಟ್ ಆಧಾರದಲ್ಲಿ ಈ ದಾಳಿ ನಡೆದಿದೆ. ಇದ್ಯಾವುದು ರಾಜಕೀಯ ಪ್ರೇರಿತವಲ್ಲ. ಸುಮ್ಮನೆ ಬಿಜೆಪಿ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.