ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ 4 ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ: ಜಗದೀಶ ಶೆಟ್ಟರ್
🎬 Watch Now: Feature Video
ಧಾರವಾಡ: ಬೆಳಗಾವಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 4 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ. ರಮೇಶ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ಪ್ರಚಾರಕ್ಕೆ ಬರಲು ಹೇಳಿದ್ದೇವೆ. ಅವರು ಸಹ ಬರುವುದಾಗಿ ತಿಳಿಸಿದ್ದಾರೆ. ಕೇಸ್ ನಡೆಯುತ್ತಿರುವ ಹಿನ್ನೆಲೆ ಈಗ ಅವರಿಗೆ ಬರಲು ಆಗಿಲ್ಲ. ಆದರೆ, ನಾನು ಅವರೊಂದಿಗೆ ಮಾತನಾಡಿರುವೆ, ನಮ್ಮ ಕ್ಷೇತ್ರಗಳಲ್ಲಿ ಬಹುಮತ ದೊರಕಿಸಿ ಕೊಡ್ತೀವಿ ಎಂಬ ವಿಶ್ವಾಸ ಕೊಟ್ಟಿದ್ದಾರೆ ಎಂದರು. ಇನ್ನೂ ಸಿಎಂ ಹಸ್ತಕ್ಷೇಪದ ಬಗ್ಗೆ ಈಶ್ವರಪ್ಪ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿಎಂ ವಿರುದ್ಧ ಅಂತಾ ತಿಳಿಯಬಾರದು. ಏನೋ ವ್ಯತ್ಯಾಸ ಆಗಿದೆ, ಅದನ್ನು ತಿಳಿಸುವ ಕೆಲಸ ಮಾಡಿದ್ದಾರೆ. ಸಿಎಂ ಅವರ ಜೊತೆ ಕುಳಿತು ಮಾತನಾಡುತ್ತಾರೆ, ಅದು ಬಗೆ ಹರಿಯಲಿದೆ ಎಂದರು.