ETV Bharat / entertainment

'ಹನುಮಂತು ಮುಗ್ಧ ಅಲ್ಲ': ಕಿಚ್ಚನ ಬಿಗ್​​ಬಾಸ್​​​ನಲ್ಲಿ ಚರ್ಚೆ ಜೋರು; ನೀವೇನಂತೀರಾ - BIGG BOSS KANNADA 11

'ಹನುಮಂತ ಮುಗ್ದಾನಾ?'... ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಹೀಗೊಂದು ಪ್ರಶ್ನೆ.

bigg boss kannada 11
ಬಿಗ್​ ಬಾಸ್​ ಕನ್ನಡ 11 (Photo: Bigg Boss team)
author img

By ETV Bharat Entertainment Team

Published : Nov 9, 2024, 5:48 PM IST

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​​ ಸೀಸನ್​​ 11' ಆರನೇ ವಾರಾಂತ್ಯದಲ್ಲಿದೆ. ವೀಕೆಂಡ್​ ಬಂತಂದ್ರೆ ಸುದೀಪ್​​ ಸಾರಥ್ಯದ ಸ್ಪೆಷಲ್​ ಶೋಗಳನ್ನು ವೀಕ್ಷಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿರುತ್ತಾರೆ. ಅದರಂತೆ ಇಂದು ವಾರದ ಕಥೆ ಕಿಚ್ಚನ ಜೊತೆ, ನಾಳೆ ವೀಕೆಂಡ್​ ವಿತ್ ಸುದೀಪ ಕಾರ್ಯಕ್ರಮಗಳು ಪ್ರಸಾರ ಕಾಣಲಿದೆ. ಈ ಎರಡೂ ಸಂಚಿಕೆಗಳನ್ನು ವೀಕ್ಷಿಸಲು ಅಪಾರ ಸಂಖ್ಯೆಯ ಪ್ರೇಕ್ಷಕರು ಕಾತರರಾಗಿದ್ದಾರೆ.

'ಹನುಮಂತ ಮುಗ್ದಾನಾ?' ವಾರದ ಕತೆ ಕಿಚ್ಚನ ಜೊತೆ. ಇಂದು ರಾತ್ರಿ 9ಕ್ಕೆ ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್​ ಇಂದಿನ ಪ್ರೋಮೋ ಅನಾವರಣಗೊಳಿಸಿದೆ. ಅದರಲ್ಲಿ, ಹನುಮಂತು ಅವರ ಮುಗ್ಧತೆ ಬಗ್ಗೆ ಪ್ರಶ್ನೆ ಎದ್ದಿದೆ. ಸಹ ಸ್ಪರ್ಧಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹನುಮಂತು ಕೊಟ್ಟ ಜಾಣ್ಮೆಯ ಉತ್ತರ ನೋಡುಗರಿಗೆ ಹಿಡಿಸಿದಂತಿದೆ. ಆಶ್ಚರ್ಯ ಕೂಡಾ ಆಗಿದೆ.

ಕಿಚ್ಚ ಸುದೀಪ್​ ಅವರು ಸುರೇಶ್​ ಬಳಿ ಪ್ರಶ್ನೆ ಕೇಳಿದ್ದಾರೆ. ಯಾರೇ ನಾಮಿನೇಟ್​​ ಮಾಡಿದ್ರು ಜಗಳ ಆಡ್ತೀರಿ. ಹನುಮಂತು ಬಳಿ ಸುಮ್ಮನಿರುತ್ತೀರಿ, ಅದೇಗೆ ಸಾಧ್ಯ? ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸುರೆಶ್​​, ನನ್ನ ಸಮಯದಲ್ಲಿ ನಾನು ಹೇಳಿದ್ದೇನೆ, ನಿಮ್ಮ ಬಾರಿ ಬಂದಾಗ ನಿಮ್ಮ ಕಾರಣಗಳನ್ನು ಕೊಡಿ ಎಂದು ಹೇಳಿಬಿಡ್ತಾರೆ. ಹಾಗಾಗಿ ಹೆಚ್ಚೇನು ಮಾತನಾಡಲು ಸಾಧ್ಯ ಇಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಯಶ್ 'ಟಾಕ್ಸಿಕ್​​​'ಗಾಗಿ ಭಾರತಕ್ಕೆ ಬಂದ ಹಾಲಿವುಡ್ ಸ್ಟಂಟ್ ಮ್ಯಾನ್​​: ರಾಕಿಂಗ್​ ಸ್ಟಾರ್​​ ಹಾಡಿ ಹೊಗಳಿದ ಜೆ.ಜೆ ಪೆರಿ

ನಂತರ, ಒಬ್ಬೊಬ್ಬರೇ ತಮ್ಮ ಅನಿಸಿಕೆಗಳನ್ನು ಕೊಡಲು ಶುರು ಮಾಡಿದ್ದಾರೆ. ಮೋಕ್ಷಿತಾ ಮಾತನಾಡಿ, ಇನೋಸೆಂಟ್​ ಆಗಿ ಕಾಣಿಸ್ತಾರೆ ಅವರು ಆದ್ರೆ ಅವರು ಇನೋಸೆಂಟ್​ ಅಲ್ಲಾ. ಅವರಿಗೆ ಮೈಂಡ್​ ಗೇಮ್​ ಹೇಗೆ ಆಡೋದು ಅನ್ನೋದು ಚೆನ್ನಾಗಿ ಗೊತ್ತಿದೆ ಎಂದು ತಿಳಿಸಿದ್ದಾರೆ. ತ್ರಿವಿಕ್ರಮ್ ಮಾತನಾಡಿ, ಅವರನ್ನು ನೋಡಿದ್ರೆ ಮುಗ್ಧ ಅನಿಸುತ್ತೆ. ಆದ್ರೆ ಅವರು ಬುದ್ಧಿವಂತ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಂತರ ಚೈತ್ರಾ ಮಾತನಾಡಿ, ಹೊರಗಡೆ ತೋರಿಕೊಳ್ಳುತ್ತಿರುವಷ್ಟು ಇನೋಸೆಂಟ್​ ಅಲ್ಲಾ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 12 ವರ್ಷಗಳಲ್ಲಿ 80 ಸಿನಿಮಾ: ಸ್ಯಾಂಡಲ್​​ವುಡ್​​ ಉನ್ನತಿಯ ಕನಸು ಕಂಡಿದ್ದ ಶಂಕರ್​ ನಾಗ್​​ ಜನ್ಮದಿನ

ನಂತರ ಹನುಮಂತು ಮಾತನಾಡಿ, ಬಂದವರೆಲ್ಲರೂ ಇನೋಸೆಂಟ್​ ಇದ್ದಾರೆ. ಏನು ಗೊತ್ತಿಲ್ಲದಂಗೆ ಎಲ್ಲರೂ ನಾಟಕ ಮಾಡ್ತಾರೆ. ಆದ್ರೆ ನನ್ನ ಹಿಡ್ಕೊಂಡಿದ್ದಾರಷ್ಟೇ ಈ ವಿಷಯಕ್ಕೆ ಎಂದು ಸಹಸ್ಪರ್ಧಿಗಳು ಹುಬ್ಬೇರಿಸುವಂತ ಉತ್ತರ ಕೊಟ್ಟಿದ್ದಾರೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಪ್ರೋಮೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸಂಪೂರ್ಣ ಸಂಚಿಕೆ ವೀಕ್ಷಿಸುವ ಕಾತರದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.