ETV Bharat / international

ರಷ್ಯಾದ ಪ್ರಥಮ ಉಪ ಪ್ರಧಾನಿ ನಾಳೆ ಭಾರತಕ್ಕೆ ಆಗಮನ

ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮಾಂಟುರೊವ್ ನಾಳೆ ಭಾರತಕ್ಕೆ ಆಗಮಿಸಲಿದ್ದಾರೆ.

ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮಾಂಟುರೊವ್
ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮಾಂಟುರೊವ್ (IANS)
author img

By ETV Bharat Karnataka Team

Published : Nov 10, 2024, 1:20 PM IST

ನವದೆಹಲಿ: ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮಾಂಟುರೊವ್ ನವೆಂಬರ್ 11 ರಿಂದ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತದಲ್ಲಿ ಅವರು ರಷ್ಯಾ-ಭಾರತೀಯ ವ್ಯಾಪಾರ ವೇದಿಕೆಯ ಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಉನ್ನತ ಮಟ್ಟದ ಅಂತರ್ ಸರ್ಕಾರಿ ಸಮಾವೇಶದ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ.

ಮಾಂಟುರೊವ್ ಅವರ ಭೇಟಿಯು ರಷ್ಯಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ಹೆಚ್ಚಿಸುವ ಪ್ರಯತ್ನಗಳ ಮುಂದುವರಿದ ಭಾಗವಾಗಿದೆ. ನವೆಂಬರ್ 11 ರಂದು ಮುಂಬೈನಲ್ಲಿ ನಡೆಯಲಿರುವ ರಷ್ಯಾ-ಭಾರತೀಯ ವ್ಯಾಪಾರ ವೇದಿಕೆಯ ಪೂರ್ಣ ಸಮಾವೇಶದಲ್ಲಿ ಮಾಂಟುರೊವ್ ಭಾಗವಹಿಸಲಿದ್ದಾರೆ. ಇದು ಎರಡೂ ದೇಶಗಳ ಉದ್ಯಮಿಗಳ ನಡುವೆ ಬಲವಾದ ವ್ಯಾಪಾರ ಸಂಬಂಧಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ.

ಬಿಸಿನೆಸ್ ಕೌನ್ಸಿಲ್ ಫಾರ್ ಕೋ ಆಪರೇಶನ್ ವಿತ್ ಇಂಡಿಯಾ ಮತ್ತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್ಐಸಿಸಿಐ) ಆಯೋಜಿಸಿರುವ ಈ ಸಮಾವೇಶದಲ್ಲಿ ಕೈಗಾರಿಕಾ ಸಹಯೋಗ, ಸಾರಿಗೆ ಮತ್ತು ಲಾಜಿಸ್ಟಿಕ್ಸ್, ಹಣಕಾಸು, ಡಿಜಿಟಲ್ ತಂತ್ರಜ್ಞಾನಗಳು ಮತ್ತು ಅಂತರ ಪ್ರಾದೇಶಿಕ ಸಂಪರ್ಕಗಳು ಸೇರಿದಂತೆ ಸಹಕಾರದ ಪ್ರಮುಖ ಕ್ಷೇತ್ರಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ.

ಕಳೆದ ವರ್ಷ 'ರಷ್ಯಾ ಮತ್ತು ಭಾರತದ ನಡುವಿನ ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆ ಸಹಕಾರದ ಸಾಮರ್ಥ್ಯ: ಅಭಿವೃದ್ಧಿ ಸನ್ನಿವೇಶಗಳು' ಎಂಬ ಹೆಸರಿನಲ್ಲಿ ನಡೆದ ಸಮಾವೇಶದಲ್ಲಿ ಜಾಗತಿಕ ಆರ್ಥಿಕ ಬದಲಾವಣೆಗಳು ಮತ್ತು ಉದಯೋನ್ಮುಖ ಭೌಗೋಳಿಕ ರಾಜಕೀಯ ಸವಾಲುಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗಿತ್ತು.

ಈ ಬಾರಿ ವ್ಯಾಪಾರ ವೇದಿಕೆಯ ಸಮಾವೇಶದ ನಂತರ ಮಾಂಟುರೊವ್ ನವದೆಹಲಿಗೆ ಪ್ರಯಾಣಿಸಲಿದ್ದು, ಅಲ್ಲಿ ಅವರು ನವೆಂಬರ್ 12 ರಂದು ವಿದೇಶಾಂಗ ಸಚಿವ (ಇಎಎಂ) ಎಸ್ ಜೈಶಂಕರ್ ಅವರೊಂದಿಗೆ ವ್ಯಾಪಾರ, ಆರ್ಥಿಕ, ವೈಜ್ಞಾನಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಹಕಾರ ಕುರಿತ ಭಾರತ-ರಷ್ಯಾ ಅಂತರ ಸರ್ಕಾರಿ ಆಯೋಗದ (ಐಆರ್ ಐಜಿಸಿ-ಟಿಇಸಿ) 25 ನೇ ಸಮಾವೇಶದ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ.

ಐಆರ್​ಐಜಿಸಿ-ಟಿಇಸಿ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಆರ್ಥಿಕ ಸಹಯೋಗಕ್ಕಾಗಿ ಉನ್ನತ ಮಟ್ಟದ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ವ್ಯಾಪಾರದಿಂದ ಹಿಡಿದು ಸಾಂಸ್ಕೃತಿಕ ವಿನಿಮಯದವರೆಗೆ ವಿಶಾಲ ವ್ಯಾಪ್ತಿಯ ಕ್ಷೇತ್ರಗಳನ್ನು ಒಳಗೊಂಡಿದೆ. ಡೆನಿಸ್ ಮಾಂಟುರೊವ್ ಅವರ ಭೇಟಿಯು ವಿವಿಧ ದ್ವಿಪಕ್ಷೀಯ ಸಭೆಗಳನ್ನು ಒಳಗೊಂಡಿರುತ್ತದೆ. ಇದು ಅನೇಕ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಪಾಲುದಾರಿಕೆಯನ್ನು ಬಲಪಡಿಸುವ ರಷ್ಯಾದ ಬದ್ಧತೆಯನ್ನು ಸೂಚಿಸುತ್ತದೆ.

ಇದನ್ನೂ ಓದಿ : ಭಾರತವೂ ಈಗ ಜಾಗತಿಕ ಸೂಪರ್ ಪವರ್ ರಾಷ್ಟ್ರ: ವ್ಲಾಡಿಮಿರ್​ ಪುಟಿನ್ ಶ್ಲಾಘನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.