ETV Bharat / education-and-career

ನಿಮಗೆ ಪರೀಕ್ಷಾ ಒತ್ತಡವೇ?: ಈ 6 ಸ್ಮಾರ್ಟ್​ ಸಲಹೆಗಳನ್ನು ಪಾಲಿಸಿ ಸಾಕು ಅಂತಿದ್ದಾರೆ ತಜ್ಞರು - BEAT EXAM STRESS

ಪರೀಕ್ಷಾ ಸಮಯದಲ್ಲಿ ಆಗುವ ಭಯವೂ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸುತ್ತದೆ. ಈ ಹಿನ್ನೆಲೆಯಲ್ಲಿ ಅವರೇನು ಮಾಡಬಹುದು ಎಂಬ ಕುರಿತು ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.

beat-exam-stress-experts-suggest-these-6-smart-strategies
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Feb 11, 2025, 2:32 PM IST

ಹೈದರಾಬಾದ್​: ಫೆಬ್ರವರಿಯಲ್ಲಿ ಬಿಸಿಲು ಏರುತ್ತಿದ್ದಂತೆ, ವಿದ್ಯಾರ್ಥಿಗಳಲ್ಲಿ ಪೋಷಕರಲ್ಲೂ ಕೂಡ ಪರೀಕ್ಷಾ ಜ್ವರ ಉಂಟಾಗುತ್ತದೆ. ಪರೀಕ್ಷಾ ಸಮಯದಲ್ಲಿ ಎದುರಾಗುವ ಆತಂಕ, ಮಾನಸಿಕ ಒತ್ತಡ ವಿದ್ಯಾರ್ಥಿಗಳ ಆರೋಗ್ಯ ಮತ್ತು ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಈ ರೀತಿಯ ಸಮಸ್ಯೆಗೆ ಎಡೆ ಮಾಡಿಕೊಡದೇ ಇರಲು ಉತ್ತಮ ಅಧ್ಯಯನದ ಯೋಜನೆ, ಆರೋಗ್ಯಕರ ಜೀವನಶೈಲಿಯ ಆಯ್ಕೆ ಹಾಗೂ ಸಕಾರಾತ್ಮಕ ಮನಸ್ಥಿತಿ ಅಗತ್ಯವಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವ ಜೊತೆಗೆ ಉತ್ತಮ ಫಲಿತಾಂಶದ ಸಾಧನೆಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಈ ಪರೀಕ್ಷಾ ಒತ್ತಡ ನಿಭಾಯಿಸಲು ತಜ್ಞರು ಆರು ಕಾರ್ಯತಂತ್ರಗಳ ಪಾಲನೆಗೂ ಕರೆ ನೀಡಿದ್ದಾರೆ.

ಓದಿನ ಸಮಯದ ಯೋಜನೆ: ಅನೇಕ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಆರಂಭದಲ್ಲಿ ಯೋಜನೆ ರೂಪಿಸುವಲ್ಲಿ ಹಿಂದೆ ಬೀಳುತ್ತಾರೆ. ಇದರಿಂದ ಅವರಲ್ಲಿ ಹರಿಬರಿ ಜೊತೆಗೆ ತೀವ್ರ ಒತ್ತಡಕ್ಕೆ ಕಾರಣವಾಗುವಂತೆ ಮಾಡುತ್ತದೆ. ಅಧ್ಯಯನದಲ್ಲಿ ಸ್ಥಿರತೆ ಮತ್ತು ನಿಯಮಿತ ಅಧ್ಯಯನವೂ ಇಂತಹ ಆತಂಕವನ್ನು ತಡೆಯಲು ಸಾಧ್ಯವಾಗುವಂತೆ ಮಾಡುತ್ತದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಅರ್ಥೈಸಿಕೊಳ್ಳುವಿಕೆ, ಮನನ ಮತ್ತು ಆತ್ಮವಿಶ್ವಾಸ ಮೂಡಿಸುವಲ್ಲಿ ಈ ರೀತಿಯ ರಚನಾತ್ಮಕ ಅಧ್ಯಯನ ಯೋಜನೆ ಅವಶ್ಯವಾಗಿದೆ.

ನಿದ್ರೆಗೆ ಒತ್ತು ನೀಡಿ: ಪರೀಕ್ಷಾ ಸಮಯದಲ್ಲಿ ನಿದ್ದೆಗೆಡುವುದರಿಂದ, ಓದಿನ ಸಮಯ ಹಾಗೂ ವಿದ್ಯಾರ್ಥಿಗಳ ಆರೋಗ್ಯ ಹೀಗೆ ಎರಡರ ಮೇಲೂ ಹಾನಿ ಮಾಡುತ್ತದೆ. ವಿದ್ಯಾರ್ಥಿಗಳು ಗಮನ ಹರಿಸಲು, ಚೆನ್ನಾಗಿ ಓದಿದ್ದು ನೆನಪಿರಲು ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ಕನಿಷ್ಠ 7-8 ಗಂಟೆ ಗುಣಮಟ್ಟದ ನಿದ್ರೆ ಮಾಡುವುದು ಅತ್ಯಗತ್ಯ.

  • ಇದಕ್ಕಾಗಿ ನಿರ್ದಿಷ್ಟ ಸಮಯದಲ್ಲಿ ಮಲಗುವ - ಏಳುವ ಅಭ್ಯಾಸ ಮಾಡಿಕೊಳ್ಳಿ.
  • ಮಲಗುವ 30 ನಿಮಿಷದ ಮುನ್ನ ನಿಮ್ಮ ಫೋನ್​ ಮತ್ತು ಲ್ಯಾಪ್​ಟಾಪ್​ ದೂರವಿಡಿ
  • ಆರಾಮದಾಯಕ ನಿದ್ರೆ ಪರಿಸರವನ್ನು ರೂಪಿಸಿಕೊಳ್ಳಿ.

ಅಧ್ಯಯನ - ವಿರಾಮ - ಅಧ್ಯಯನ ಮಾದರಿ ಅನುಸರಿಸಿ: ವಿರಾಮವಿಲ್ಲದೇ ದೀರ್ಘಕಾಲದ ಓದು ಕಿರಿಕಿರಿಗೆ ಕಾರಣವಾಗುತ್ತದೆ. ಈ ಹಿನ್ನೆಲೆ ಪೊಮೊಡೊರೊ ತಂತ್ರ ಪಾಲಿಸಿ. ಪ್ರತಿ 20 ರಿಂದ 30 ನಿಮಿಷ ಓದಿ ಒಂದು ಸಣ್ಣ ವಿರಾಮ ಪಡೆದು ಮತ್ತೆ ಓದಿಗೆ ಮರಳಿ. ಇದು ನಿಮ್ಮ ಮನಸ್ಸನ್ನು ತಾಜಾ ಆಗಿಸುವ ಜೊತೆ ಕ್ರಿಯಾಶೀಲಗೊಳಿಸುತ್ತದೆ.

ಸಕಾರಾತ್ಮಕತೆಯಿಂದ ಇರಿ ಮತ್ತು ಬೆಂಬಲ ಪಡೆಯಿರಿ: ಸಕರಾತ್ಮಕತೆ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಮತ್ತು ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಈ ಅಂಶವನ್ನು ಮರೆಯಬೇಡಿ.

  • ವೈಫಲ್ಯಕ್ಕಿಂತ ಪ್ರಯತ್ನದ ಕಡೆಗೆ ಹೆಚ್ಚು ಗಮನವಿರಲಿ.
  • ಒತ್ತಡಕ್ಕೆ ಒಳಗಾದಾಗ ಶಿಕ್ಷಕರು, ಸಮಲೋಚಕರು ಅಥವಾ ಸಹವರ್ತಿಗಳ ಜೊತೆಗೆ ಮಾತನಾಡಿ
  • ಭಾವನೆಗಳೊಂದಿಗೆ ಹೋರಾಡುವ ಬದಲಾಗಿ ಸಮಸ್ಯೆಯನ್ನು ತಿಳಿಸಿ.

ವ್ಯಾಯಾಮ ಮತ್ತು ವಿಶ್ರಾಂತಿ ತಂತ್ರ: ನಿಯಮಿತವಾದ ದೈಹಿಕ ಚಟುವಟಿಕೆ ಕೂಡ ಒತ್ತಡ ಕಡಿಮೆ ಮಾಡುವಂತೆ ಹಾಗೂ ಏಕಾಗ್ರತೆ ಕಾಪಾಡಲು ಸಹಾಯ ಮಾಡುತ್ತದೆ.

  • ದಿನದಲ್ಲಿ 30 ನಿಮಿಷ ನಡಿಗೆ, ಸ್ಟೆಚಿಂಗ್​ ಅಥವಾ ಯೋಗದಂತಹ ವ್ಯಾಯಾಮ ಮಾಡಿ, ಮನಸ್ಸು ಮತ್ತು ದೇಹವನ್ನು ಉತ್ಸಾಹದಿಂದ ಇರಿಸಿಕೊಳ್ಳಿ.
  • ದೀರ್ಘ ಶ್ವಾಸದ ತಂತ್ರ: ದೀರ್ಘವಾಗಿ ಉಸಿರೆಳೆಯುವ ಮತ್ತು ಬಿಡುವ ಹಾಗೇ ಅದನ್ನು ಕೆಲವು ಕ್ಷಣ ಬಿಗಿ ಹಿಡಿಯುವ ತಂತ್ರ ರೂಪಿಸಿ.

ಆರೋಗ್ಯಯುತ ಮನಸ್ಸಿಗೆ ಸರಿಯಾದ ಆಹಾರ: ಒತ್ತಡ ನಿವಾರಣೆಯಲ್ಲಿ ಪೋಷಕಾಂಶಯುಕ್ತ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ತಜ್ಞರ ಸಲಹೆಯಂತೆ, ಸಕ್ಕರೆಯುಕ್ತ ಸ್ನಾಕ್ಸ್​ ಮತ್ತು ಸಂಸ್ಕರಿತ ಆಹಾರ ತಪ್ಪಿಸಿ. ಬದಲಾಗಿ ಪೋಷಕಾಂಶ ಸಮೃದ್ಧ ಆಹಾರ ಆಯ್ಕೆ ಮಾಡಿ.

ಮೊಟ್ಟೆ, ಕುಂಬಳಕಾಯಿ ಬೀಜ, ಡಾರ್ಕ್​ ಚಾಕೋಲೆಟ್​, ಯೋಗರ್ಟ್​, ಒಮೆಗಾ 3 ಸಮೃದ್ಧ ಮೀನುಗಳನ್ನು ಆಹಾರದಲ್ಲಿ ಸೇರಿಸಿ.

ತಜ್ಞರ ಈ ಕಾರ್ಯತಂತ್ರಗಳ ಪಾಲನೆ ಮಾಡುವ ಮೂಲಕ ಅಭ್ಯರ್ಥಿಗಳು ಪರೀಕ್ಷಾ ಒತ್ತಡ ನಿವಾರಿಸಿ, ಆತ್ಮವಿಶ್ವಾಸದಿಂದ ಉತ್ತಮ ಫಲಿತಾಂಶ ಸಾಧಿಸಬಹುದು.

ಇದನ್ನೂ ಓದಿ: ಕೈತುಂಬಾ ಸಂಬಳ ಪಡೆಯುವ ಕೆಲಸ ಪಡೆಯಬೇಕಾ?: ಹಾಗಾದ್ರೆ ಎಕ್ಸ್​ಪರ್ಟ್​​ಗಳ ಈ ಸಲಹೆ ಪಾಲಿಸಿ

ಇದನ್ನೂ ಓದಿ: ಸ್ಮಾರ್ಟ್ ಕ್ಲಾಸ್​, ಕಂಪ್ಯೂಟರ್ ಲ್ಯಾಬ್, ಹೈಟೆಕ್ ಲೈಬ್ರರಿ: ಇದು ಖಾಸಗಿ ಅಲ್ಲ, ಸರ್ಕಾರಿ ಶಾಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.