ಕಾಫಿನಾಡಿಗೆ ಲಗ್ಗೆ ಇಟ್ಟ ಕಾಡಾನೆ ಹಿಂಡು; ಕಂಗಾಲಾದ ಹಳ್ಳಿಗರು - ELEPHANTS ENTERED TO COFFEE LAND

🎬 Watch Now: Feature Video

thumbnail

By ETV Bharat Karnataka Team

Published : Nov 9, 2024, 7:39 PM IST

ಚಿಕ್ಕಮಗಳೂರು : ಕಾಫಿನಾಡಿಗೆ ಲಗ್ಗೆ ಇಟ್ಟಿರುವ ಕಾಡಾನೆ ಹಿಂಡು ಬೀಟಮ್ಮ ಗ್ಯಾಂಗ್ ಹಾವಳಿಗೆ ಮಲೆನಾಡು ಜನರು ಕಂಗಾಲಾಗಿದ್ದಾರೆ. ನಿತ್ಯ ಒಂದೊಂದು ತೋಟಕ್ಕೆ ದಾಂಗುಡಿ ಇಡುತ್ತಿರುವುದರಿಂದ ಹಳ್ಳಿಗರು ಆತಂಕದಲ್ಲಿ ಬದುಕುವಂತಾಗಿದೆ. 

ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ಆಲ್ದೂರು ಹೋಬಳಿಯ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಮೈಕ್ ಮೂಲಕ ಅನೌನ್ಸ್ ಮಾಡಿ ಎಚ್ಚರಿಕೆ ನೀಡಿದ್ದಾರೆ. ವಾಹನ ಸವಾರರು, ಕಾರ್ಮಿಕರು, ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ. 

ಆಲ್ದೂರು ಸಮೀಪದ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಬೀಟಮ್ಮ ಗ್ಯಾಂಗ್ 17 ಆನೆಗಳು ತೋಟದ ತುಂಬಾ ಓಡಾಡಿ ಸಾಕಷ್ಟು ದಾಂಧಲೆ ಮಾಡುತ್ತಿವೆ. ಬೀಟಮ್ಮ ಗ್ಯಾಂಗ್ ಹಾವಳಿಗೆ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.  

ಕಾಫಿ ಕೊಯ್ಲಿಗೆ ಬಂದಿರುವುದರಿಂದ ಆನೆ ಹಾವಳಿಗೆ ಹಣ್ಣಾಗಿರೋ ಕಾಫಿ ಉದುರುವ ಆತಂಕದಲ್ಲಿ ಹತ್ತಾರು ಹಳ್ಳಿಯ ಬೆಳೆಗಾರರಿದ್ದಾರೆ. ತೋರಣಮಾವು, ತುಡುಕೂರು, ಮಡೆನೆರಲು, ನೊಜ್ಜೆಪೇಟೆ, ಹಳೇ ಆಲ್ದೂರು, ಆಲ್ದೂರು ಹೊಸಳ್ಳಿ, ಎಲಗುಡಿಗೆ ಭಾಗದ ಸುತ್ತಮುತ್ತವೇ ಆನೆಗಳ ಸಂಚಾರ ಇರುವುದರಿಂದ ಜನರಲ್ಲಿ ಆತಂಕ ಮೂಡಿದೆ. 

ಮೂರು ದಿನಗಳಿಂದ ಒಂದೇ ಜಾಗದ ಸುತ್ತಮುತ್ತ ಇರುವ ಕಾಡಾನೆಗಳ ಹಿಂಡು ಕಾಡಿನತ್ತ ಅಥವಾ ಬಂದ ದಾರಿಯಲ್ಲೇ ವಾಪಸ್​ ಆಗಬಹುದೆಂದು ಅರಣ್ಯ ಇಲಾಖೆ ಸಿಬ್ಬಂದಿ ಕೂಡಾ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ : ಚಾರ್ಮಾಡಿ ಘಾಟ್​​​ ರಸ್ತೆಯಲ್ಲಿ ಒಂಟಿ ಸಲಗದ ಸಂಚಾರ: ವಿಡಿಯೋ - Charmadi Ghat

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.