ETV Bharat / health

ಉಪವಾಸ Vs ಕಡಿಮೆ ತಿನ್ನುವುದು Vs ಬೇಗ ಊಟ ಮಾಡುವುದು: ತೂಕ ಇಳಿಕೆಗೆ ಯಾವುದು ಉತ್ತಮ ಆಯ್ಕೆ?

Best Food Habits For Weight Loss: ಜಗತ್ತಿನಾದ್ಯಂತ ಎಂಟು ಜನರಲ್ಲಿ ಒಬ್ಬರು ಬೊಜ್ಜಿನಿಂದ ಬಳಲುತ್ತಿದ್ದಾರೆ ಎಂದು ಸಂಶೋಧನೆಯೊಂದು ತಿಳಿಸಿದೆ. ತಜ್ಞರು ಸಲಹೆಗಳನ್ನು ಪಾಲಿಸಿದರೆ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ.

WEIGHT LOSS DIET  WEIGHT LOSS TIPS  WEIGHT LOSS FOOD HABITS  HOW TO LOSE WEIGHT FAST
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Nov 9, 2024, 3:57 PM IST

Best Food Habits For Weight Loss: ಜಗತ್ತಿನಾದ್ಯಂತ ಎಂಟು ಜನರಲ್ಲಿ ಒಬ್ಬರು ಬೊಜ್ಜಿನಿಂದ ಬಳಲುತ್ತಿದ್ದಾರೆ ಎಂದು ಸಂಶೋಧನೆಯೊಂದು ಸ್ಪಷ್ಟಪಡಿಸಿದೆ. ಅಧಿಕ ದೇಹದ ಕೊಬ್ಬು ಟೈಪ್ - 2 ಮಧುಮೇಹ, ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ ಎಂದು ಅಧ್ಯಯನವು ತಿಳಿಸಿದೆ. ಆಸ್ಟ್ರೇಲಿಯಾದ ಬಾಂಡ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಹ್ಯಾಲಿ ಓ ನೀಲ್ ಮತ್ತು ಲೋಯಿ ಆಲ್ಬರ್ಟ್ ಕೌನಿ ಅವರು ಬೊಜ್ಜಿನಿಂದ ಉಂಟಾಗುವ ಸಮಸ್ಯೆಗಳು ಮತ್ತು ಬೊಜ್ಜು ತಡೆಯುವ ವಿಧಾನಗಳ ಕುರಿತು ಜಂಟಿಯಾಗಿ ಅಧ್ಯಯನ ನಡೆಸಿದ್ದಾರೆ.

ಸಂಶೋಧನೆ ಏನು ತಿಳಿಸುತ್ತೆ: ಅಧಿಕ ತೂಕವು ಸ್ಥೂಲಕಾಯತೆಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ಬೊಜ್ಜು ತೊಡೆದುಹಾಕಲು, ನಿಮ್ಮ ಆಹಾರ ಪದ್ಧತಿ ಬದಲಾಯಿಸಬೇಕು. ಕಡಿಮೆ ಕ್ಯಾಲೋರಿ ಹೊಂದಿರುವ ಆರೋಗ್ಯಕರ ಆಹಾರವನ್ನು ಸೇವಿಸಿ. ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರು ತೂಕ ಕಳೆದುಕೊಳ್ಳಲು ಅಲ್ಪ ಪ್ರಮಾಣದ ಆಹಾರ ತಿನ್ನುವುದು ಮತ್ತು ರಾತ್ರಿಯ ಊಟವನ್ನು ಸ್ವಲ್ಪ ಮುಂಚಿತವಾಗಿ ತಿನ್ನುವುದು ಸೇರಿದಂತೆ ಮಧ್ಯಂತರ ಉಪವಾಸ ಮಾಡಬೇಕು. ಈ ಮೂರೂ ತೂಕ ಕಡಿಮೆ ಮಾಡಬಹುದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ವರದಿ ತಯಾರಿಸಲು ಸಂಶೋಧಕರು 12 ವಾರಗಳಲ್ಲಿ 2,500 ಜನರನ್ನು ಅಧ್ಯಯನ ಮಾಡಿದರು. ಇದರ ಪ್ರಕಾರ, ಬಹುತೇಕ ಎಲ್ಲರೂ 1.4 - 1.8 ಕೆಜಿ ತೂಕ ಕಳೆದುಕೊಂಡಿದ್ದಾರೆ.

ಬೇಗ ತಿನ್ನುವುದು ಉತ್ತಮ: ಪಚನ ಕ್ರಿಯೆ ಸರಿಯಾಗಿಲ್ಲದಿದ್ದಾಗ, ಮಾನವ ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಉತ್ಪಾದಿಸುವುದಿಲ್ಲ. ಇದು ತೂಕ ಹೆಚ್ಚಾಗುವುದು, ಆಯಾಸ ಮತ್ತು ಮಧುಮೇಹ ಸೇರಿದಂತೆ ಅನೇಕ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಮಧ್ಯರಾತ್ರಿ ತಿಂಡಿ ತಿನ್ನುವುದರಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಅಲ್ಲದೇ ರಾತ್ರಿ ವೇಳೆ ಹೆಚ್ಚು ಆಹಾರ ಸೇವಿಸಿದರೆ, ಸರಿಯಾಗಿ ಜೀರ್ಣವಾಗುವುದಿಲ್ಲ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಆದರೆ, ರಾತ್ರಿ ಆದಷ್ಟು ಬೇಗ ತಿನ್ನುವುದರಿಂದ ತೂಕ ಇಳಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಾಗದೇ ಇರಬಹುದು. ಕೆಲವರು ತಡರಾತ್ರಿ ಮಲಗುತ್ತಾರೆ. ಇನ್ನು ಕೆಲವರು ನಿದ್ದೆ ಮಾಡುವುದೇ ಇಲ್ಲ. ಕ್ರೋನೋಟೈಪ್ ಇರುವವರು ರಾತ್ರಿ ಬೇಗ ಊಟ ಮಾಡಿದರೂ ತೂಕ ಕಡಿಮೆಯಾಗುತ್ತದೆ ಎಂಬುದು ಖಚಿತವಾಗಿಲ್ಲ.

ಕಡಿಮೆ ಊಟ ಮಾಡುವುದು: ಸಾಮಾನ್ಯವಾಗಿ ಅನೇಕ ಜನರು ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡುತ್ತಾರೆ. ಇತರರು 1-2 ಬಾರಿ ಊಟ ಮಾಡುತ್ತಾರೆ. ಇವುಗಳಿಗೆ ಹೋಲಿಸಿದರೆ, ಇತ್ತೀಚಿನ ಹಲವಾರು ಅಧ್ಯಯನಗಳು ದಿನಕ್ಕೆ ಆರು ಬಾರಿ ತಿನ್ನುವುದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ. ಆದಾಗ್ಯೂ, ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು ಎಂದು ಹೇಳಲಾಗಿದೆ. ಮತ್ತೊಂದೆಡೆ, ಬಾಂಡ್ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ದಿನಕ್ಕೆ ಮೂರು ಊಟಗಳು ಸಾಕು. ಮೂರು ಬಾರಿ ಊಟ ಮಾಡುವುದು ಆರು ಬಾರಿಗಿಂತ ಉತ್ತಮವಾಗಿದೆ. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಸಾಕು. ತಿಂಡಿಗಳನ್ನು ತಪ್ಪಿಸಿ. ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನದ ಊಟದ ನಂತರ ರಾತ್ರಿಯ ಊಟ ಸಾಧ್ಯವಾದಷ್ಟು ಬೇಗ ಮಾಡಬೇಕು.

ಉಪವಾಸ: ತಡರಾತ್ರಿ ತಿನ್ನುವುದರಿಂದ ದೇಹದ ಅಂಗಗಳ ಆರೋಗ್ಯ ಮತ್ತು ಕಾರ್ಯಚಟುವಟಿಕೆಗೆ ಹಾನಿಯಾಗುತ್ತದೆ. ಇದು ಕಾಲಾನಂತರದಲ್ಲಿ ಟೈಪ್-2 ಮಧುಮೇಹ ಮತ್ತು ಇತರ ದೀರ್ಘಕಾಲದ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಅದರಲ್ಲೂ ರಾತ್ರಿ ಪಾಳಿ ಮಾಡುವವರಿಗೆ ಈ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಮತ್ತು ಸಾಂದರ್ಭಿಕವಾಗಿ ಉಪವಾಸ ಮಾಡುವುದು ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನೀವು ದಿನದಲ್ಲಿ 6-10 ಗಂಟೆಗಳ ಒಳಗೆ ನಿಮ್ಮ ದೇಹಕ್ಕೆ ಅಗತ್ಯವಿರುವ ಕ್ಯಾಲೊರಿಗಳನ್ನು ಒದಗಿಸಬೇಕು. ಸಮಯಕ್ಕೆ ಸರಿಯಾಗಿ ತಿನ್ನುವುದರಿಂದ ದಿನಕ್ಕೆ 200 ಕ್ಯಾಲೋರಿಗಳಷ್ಟು ಕಡಿಮೆ ಆಹಾರ ಪಡೆಯಬಹುದು.

ಯಾವುದು ಉತ್ತಮ?: ಹಿಂದೆ, ವೈದ್ಯರು ತೂಕ ನಷ್ಟಕ್ಕೆ ಕ್ಯಾಲೋರಿ ಸಮತೋಲನ ಮಾತ್ರ ನೋಡುತ್ತಿದ್ದರು. ಆದರೆ, ನೀವು ಪ್ರಸ್ತುತ ತಿನ್ನುತ್ತಿರುವ ಆಹಾರವನ್ನು ಎಷ್ಟು ಬಾರಿ ತಿನ್ನುತ್ತಿದ್ದೀರಿ, ಸಮಯಕ್ಕೆ ತಿನ್ನುತ್ತಿದ್ದೀರಾ? ಮುಂತಾದವುಗಳು ತೂಕ ಇಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ತೂಕ ಇಳಿಸಿಕೊಳ್ಳಲು ಸುಲಭ ಮಾರ್ಗಗಳಿಲ್ಲ. ಆದ್ದರಿಂದ ನಿಮಗೆ ಸೂಕ್ತವಾದ ವಿಧಾನವನ್ನು ಆಯ್ಕೆ ಮಾಡುವುದು ಉತ್ತಮ.

ಇವು ಮುಖ್ಯ: ಬೆಳಗಿನ ಉಪಾಹಾರ ಮತ್ತು ಊಟಕ್ಕೆ ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸಿ. ರಾತ್ರಿ, ಸ್ವಲ್ಪ ಬೇಗ ಊಟ ಮುಗಿಸಿ. ಈ ರೀತಿಯಾಗಿ ದಿನಕ್ಕೆ ಮೂರು ಬಾರಿ ಆಹಾರವನ್ನು ಸೇವಿಸುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಇವುಗಳನ್ನು ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.