ವಿಜಯೇಂದ್ರ ಪ್ರಚಾರದಲ್ಲಿ ಡಿ.ಕೆ.ಶಿವಕುಮಾರ ಪರ ಘೋಷಣೆ - BJP activists shouting slogans on behalf of DK Shivakumar
🎬 Watch Now: Feature Video
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕು ಸರ್ಜಾಪುರ ಗ್ರಾಮಕ್ಕೆ ವಿಜಯೇಂದ್ರ ಪ್ರವೇಶ ಮಾಡುತ್ತಿದ್ದ ವೇಳೆ ಯುವಕರು ಡಿಕೆ, ಡಿಕೆ ಎಂದು ಘೋಷಣೆ ಕೂಗಿದ್ದು, ಬಿಜೆಪಿ ಮುಖಂಡರಿಗೆ ಕಸಿವಿಸಿ ಹುಟ್ಟಿಸಿತ್ತು. ಚುನಾವಣಾ ಪ್ರಚಾರ ವೇಳೆ ಮಟ್ಟೂರು, ಕಡದರಹಾಳ, ಮ್ಯಾದರಾಳ ತಾಂಡ ಸೇರಿದಂತೆ ಕೆಲವೆಡೆ ಬಿಜೆಪಿ ಕಾರ್ಯಕರ್ತರೆೇ ವಿಜಯೇಂದ್ರ ಅವರನ್ನು ತಡೆದು ನಾವು ಬಿಜೆಪಿ ಅಭಿಮಾನಿಗಳು, ಈ ಬಾರಿ ಪ್ರತಾಪಗೌಡ ಅವರಿಗೆ ಮತ ನೀಡಲ್ಲ ಎಂದು ವಾಗ್ವಾದ ನಡೆಸಿದ್ದು, ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ.