ಎಳನೀರಿಗಾಗಿ ತೆಂಗಿನಮರವೇರಿದ ಜಾಂಬವಂತ...! ವಿಡಿಯೋ ವೈರಲ್
🎬 Watch Now: Feature Video
ಸಾಮಾನ್ಯವಾಗಿ ಚಿರತೆಗಳು ಸರಾಗಿ ಮರವೇರುವುದನ್ನು ನೋಡಿರ್ತೇವೆ. ಆದರೆ, ಎಳನೀರಿನ ಸವಿ ನೋಡ ಬಯಸಿದ ಜಾಂಬವಂತ ಸರಸರನೆ ತೆಂಗಿನಮರವೇರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಗರಹೊಳೆ ರಾಷ್ಟ್ರೀಯ ವ್ಯಾಪ್ತಿಗೆ ಹೊಂದಿಕೊಂಡಿರುವ ಕೇರಳದ ವಯನಾಡು ಅರಣ್ಯ ಕಾಡಂಚಿನ ಪ್ರದೇಶದಲ್ಲಿ ಆಹಾರ ಅರಸಿ ಬಂದ ಜಾಂಬವಂತ, ಅತ್ತ ಇತ್ತ ಆಹಾರ ಹುಡುಕಿ ಕೊನೆಗೆ ತೆಂಗಿನಮರವೇರಿ ಎಳನೀರು ಕುಡಿದು, ತೆಂಗಿನಗರಿಗಳನ್ನು ನೆಲೆಕ್ಕೆಸಿದು ಸ್ಥಳದಿಂದ ಗುಡ್ ಬೈ ಹೇಳಿದೆ. ಕರಡಿ ಚೇಷ್ಠೆಯನ್ನು ನೋಡಿದ ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.