ಬಿಬಿಎಂಪಿ ಜಯ ಸಚಿವ ಆರ್ ಅಶೋಕ್ಗೆ ಸಲ್ಲಬೇಕು.. ಮಾಜಿ ಸಚಿವ ಅರವಿಂದ ಲಿಂಬಾವಳಿ - ಪಾಲಿಕೆ ಚುಕ್ಕಾಣಿ
🎬 Watch Now: Feature Video
ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿಯುವಲ್ಲಿ ಕಡೆಗೂ ಬಿಜೆಪಿ ಯಶಸ್ವಿಯಾಗಿದೆ. ಕಳೆದ ನಾಲ್ಕು ಅವಧಿಯಲ್ಲಿ ಕೈತಪ್ಪಿದಂತಹ ಮೇಯರ್ ಗಾದಿ ಈ ಬಾರಿ ಬಿಜೆಪಿಗೆ ಒಲಿದು ಬಂದಿದೆ. ಈ ಸಂದರ್ಭದಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡ ಶಾಸಕ ಅರವಿಂದ ಲಿಂಬಾವಳಿ, ಜೆಡಿಎಸ್,ಕಾಂಗ್ರೆಸ್ನಲ್ಲಿ ಒಡಕು ಹೆಚ್ಚಿದ್ದ ಕಾರಣ ನಮಗೆ ಅಧಿಕಾರ ಸಿಕ್ಕಿದೆ. ನಮಗಿಂತ ಸಂಖ್ಯಾಬಲ ಅವರದ್ದು ಜಾಸ್ತಿ ಇದ್ದರೂ ಮನಸ್ತಾಪ ಹೆಚ್ಚಿದ ಕಾರಣ ನಮಗೆ ಜಯ ದೊರಕಿದೆ. ಸಚಿವ ಆರ್.ಅಶೋಕ್ ಅವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಲಾಗಿದೆ. ಬಿಬಿಎಂಪಿ ಜಯ ಆರ್.ಅಶೋಕ್ ಅವರಿಗೆ ಸಲ್ಲಬೇಕು ಎಂದರು.