ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಫಿಟ್ನೆಸ್ ಕುರಿತು ಡಿಸಿಪಿ ಶಶಿಕುಮಾರ್ ಹೇಳಿದ್ದೇನು? - ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಫಿಟ್ ನೆಸ್ ಕುರಿತು ಕಿವಿಮಾತು ಹೇಳಿದ ಡಿಸಿಪಿ ಶಶಿಕುಮಾರ್
🎬 Watch Now: Feature Video
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಫಿಟ್ನೆಸ್ ಅನ್ನೋದು ಬಹಳ ಮುಖ್ಯವಾದ ವಿಚಾರ. ಇಲಾಖೆಯ ಸಿಬ್ಬಂದಿ ಸ್ಲಿಮ್ ಆ್ಯಂಡ್ ಟ್ರಿಮ್ ಆಗಿರುವಂತೆ ನಗರ ಆಯುಕ್ತ ಭಾಸ್ಕರ್ ರಾವ್ ಇತ್ತೀಚೆಗೆ ಕಿವಿಮಾತು ಹೇಳಿದ್ದರು. ಇದೀಗ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಕೂಡ ತಮ್ಮ ವ್ಯಾಪ್ತಿಯಲ್ಲಿ ಬರುವ ಕಿರಿಯ ಸಿಬ್ಬಂದಿಗೆ ಕಾನೂನು ಸುವ್ಯವಸ್ಥೆ ಪಾಲನೆ, ಭದ್ರತಾ ನಿಯೋಜನೆ ಸೇರಿದಂತೆ ಅನೇಕ ರೀತಿಯ ಕೆಲಸಗಳನ್ನು ನಿರ್ವಹಿಸುವವರಿಗೆ ಫಿಟ್ನೆಸ್ ಕುರಿತು ಸಲಹೆಗಳನ್ನು ನೀಡಿದ್ದಾರೆ. ಅವರು ಈಟಿವಿ ಭಾರತನೊಂದಿಗೆ ಫಿಟ್ನೆಸ್ ಕುರಿತಂತೆ ಮಾತನಾಡಿದ್ದಾರೆ.