ನಗರದೆಲ್ಲೆಡೆ ಮೇಳೈಸಿದ ದೀಪಾವಳಿ ಹಬ್ಬದ ರಂಗು: ದೇಗುಲಗಳಲ್ಲಿ ವಿಶೇಷ ಪೂಜೆ,ಪ್ರಾರ್ಥನೆ - Bangalore deepawali celebration news,
🎬 Watch Now: Feature Video

ಉದ್ಯಾನನಗರಿ ಬೆಂಗಳೂರಿನಲ್ಲಿ ಹಬ್ಬ ಹರಿದಿನಗಳು ಬಂದ್ರೆ ಎಲ್ಲಿಲ್ಲದ ಉತ್ಸಾಹ ಕಂಡುಬರುತ್ತದೆ. ನಗರದ ದೇಗುಲಗಳಿಗೆ ತೆರಳ್ತಿರುವ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ವು. ನರಕ ಚರ್ತುದಶಿ ಹಿನ್ನೆಲೆ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ದೇವಿಯ ದರ್ಶನ ಪಡೆದು ಆಸ್ತಿಕರು ಪುನೀತರಾದರು. ಇಪ್ಪತ್ತಕ್ಕೂ ಹೆಚ್ಚು ಬಗೆಯ ತರಕಾರಿಗಳಿಂದ ತಾಯಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪೂಜೆಯ ಬಳಿಕ ಶಕ್ತಿದೇವತೆಗೆ ಭಕ್ತರು ನಿಂಬೆಹಣ್ಣಿನ ದೀಪ ಬೆಳಗುತ್ತಿದ್ದ ದೃಶ್ಯ ಕಂಡುಬಂತು. ಬನಶಂಕರಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಜುಸ್ವಾಮಿ ಮಾತನಾಡಿ, ಮೂರು ದಿನವೂ ದೇವಿಗೆ ಆಕರ್ಷಕ ಅಲಂಕಾರ, ಪೂಜೆ ಪುನಸ್ಕಾರ ಮಾಡಲಾಗುತ್ತದೆ. ಬರುವ ಭಕ್ತರಿಗೆ ಅನ್ನದಾಸೋಹವನ್ನೂ ಏರ್ಪಡಿಸಲಾಗಿದೆ ಎಂದು ಹೇಳಿದರು.