ಸ್ಕೌಟ್ಸ್ ಅಂಡ್ ಗೈಡ್ಸ್ನಿಂದ ಕೊರೊನಾ ಜಾಗೃತಿ - Awareness on corona to the Public
🎬 Watch Now: Feature Video
ಹಾಸನ: ಕೊರೊನಾದಿಂದ ದೂರವಿರಲು ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕರಪತ್ರಗಳು ಮತ್ತು ಮಾಸ್ಕ್ ಗಳನ್ನು ಸ್ಕೌಟ್ಸ್ ಅಂಡ್ ಗೈಡ್ಸ್ನಿಂದ ಸ್ವಂತ ಖರ್ಚಿನಲ್ಲಿ ವಿತರಣೆ ಮಾಡಲಾಯಿತು. ನಗರದ ಹೇಮಾವತಿ ಪ್ರತಿಮೆ ಬಳಿ ಇರುವ ಸಿಟಿ ಬಸ್ ನಿಲ್ದಾಣದಲ್ಲಿ ತರಕಾರಿ ವ್ಯಾಪಾರ ಮಾಡುವ ವರ್ತಕರಿಗೆ ಹಾಗೂ ಖರೀದಿ ಮಾಡುವ ಸಾರ್ವಜನಿಕರಿಗೆ, ಮಾಸ್ಕ್ ನೀಡಿ ಜೊತೆಗೆ ಕರಪತ್ರದೊಂದಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಕೊರೊನಾ ಎಂದರೇ ಭಯಪಡಬೇಕಾಗಿಲ್ಲ. ಆದರೆ, ದೂರವಿರಲು ಅಗತ್ಯ ಕ್ರಮವಹಿಸುವುದು ಮುಖ್ಯ. ಸರ್ಕಾರ ಜಾರಿಗೆ ತಂದಿರುವ ಕಾನೂನನ್ನು ತಪ್ಪದೇ ಪಾಲಿಸಿದಲ್ಲಿ ಕೊರೊನಾದಿಂದ ದೂರ ಇರಲು ಸಾಧ್ಯ ಎಂದರು.