ಕಲಾವಿದರಿಂದ ಸಂಗೀತದ ಮೂಲಕ ಕೊರೊನಾ ಜಾಗೃತಿ - ಚಿತ್ರ ಕಲಾವಿದ ಬಸವರಾಜ್ ಕಲಬುರಗಿ
🎬 Watch Now: Feature Video
ಕಲಬುರಗಿ: ಸಂಗೀತದ ಮೂಲಕ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ನಿವಾಸಿಯಾದ ಬಸವರಾಜ್ ಅವರು ಕೊರೊನಾ ಕುರಿತು ಸ್ವತಃ ತಾವೇ ಸಾಹಿತ್ಯ ರಚಿಸಿ ಹಾಡಿದ್ದಾರೆ. ವೃತ್ತಿಯಲ್ಲಿ ಚಿತ್ರ ಕಲಾವಿದರು. ಸಿನಿಮಾ ಹಾಡು, ಜಾನಪದ ಹಾಡು ಹೀಗೆ ಹಲವು ಹಾಡುಗಳನ್ನು ಹಾಡುವುದನ್ನು ರೂಢಿಸಿಕೊಂಡಿರುವ ಇವರು ಕೊರೊನಾದಿಂದ ದೂರ ಉಳಿಯಲು ಲಾಕ್ಡೌನ್ ಪಾಲಿಸಿ ಎಂದು ತಮ್ಮ ಹಾಡಿನ ಸಾಲುಗಳಲ್ಲಿ ವಿಸ್ತರಿಸಿದ್ದಾರೆ. ಈ ಹಾಡಿಗೆ ಸುರೇಶ ಹಾಗೂ ತಂಡದವರು ಸಂಗೀತಕ್ಕೆ ಸಾಥ್ ನೀಡಿದ್ದಾರೆ.