ಆಂಧ್ರದಲ್ಲಿ ಮದ್ಯ ನಿಷೇಧ : ಆಂಧ್ರದ ಕುಡುಕರ ರಂಪಾಟಕ್ಕೆ ಬೇಸತ್ತ ಚಿತ್ರದುರ್ಗದ ಜನತೆ - ಚಿತ್ರದುರ್ಗದಲ್ಲಿ ಮದ್ಯ ಕೊಳ್ಳಲು ಆಗಮಿಸುತ್ತಿರುವ ಆಂಧ್ರ ಕುಡುಕರು
🎬 Watch Now: Feature Video

ಚಿತ್ರದುರ್ಗ ಜಿಲ್ಲೆಯ ಗಡಿ ಭಾಗದ ಗ್ರಾಮಗಳಲ್ಲಿ ಆಂಧ್ರದ ಕುಡುಕರು ಬೆಳ್ಳಂಬೆಳಗ್ಗೆ ಕುಡಿದು ಬೀದಿ ರಂಪಾಟ ಮಾಡ್ತಿರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಆಂಧ್ರದಲ್ಲಿ ಮದ್ಯ ನಿಷೇಧ ಆಗಿರುವ ಹಿನ್ನೆಲೆ ತಂಡೋಪ ತಂಡವಾಗಿ ಮೊಳಕಾಲ್ಮೂರು ತಾಲೂಕಿನಲ್ಲಿ ಮದ್ಯ ಸೇವನೆ ಮಾಡಲು ಆಗಮಿಸುತ್ತಿರುವ ನೂರಾರು ಮದ್ಯಪ್ರಿಯರು, ಸಾರ್ವಜನಿಕ ಸ್ಥಳಗಳಲ್ಲಿ ಕಿತ್ತಾಡಿ, ತೂರಾಡಿಕೊಂಡು ದಾರಿ ಹೋಕರಿಗೆ ತೊಂದರೆ ನೀಡುತ್ತಿದ್ದಾರೆ. ಕಂಠ ಪೂರ್ತಿ ಕುಡಿದು ನಡುರಸ್ತೆಯಲ್ಲೇ ಗಲಾಟೆ ಮಾಡಿ ಚರಂಡಿ ಪಕ್ಕದಲ್ಲಿ ಮಲಗಿಕೊಳ್ಳುತ್ತಿದ್ದಾರೆ. ಆಂಧ್ರದ ಕುಡುಕರನ್ನೇ ಬಂಡವಾಳ ಮಾಡಿಕೊಂಡಿರುವ ಅಕ್ರಮ ಮದ್ಯ ಮಾರಾಟಗಾರರು, ಅವರಿಗೆ ಕಡಿಮೆ ಬೆಲೆಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಹೀಗಾಗಿ ಆಂಧ್ರ ಕುಡುಕರ ಕಾಟಕ್ಕೆ ಬ್ರೇಕ್ ಹಾಕುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
Last Updated : Dec 25, 2020, 1:47 PM IST