ಹಾಡಿನ ಮೂಲಕ ಸಾರಿಗೆ ನೌಕರರ ನೋವು ತೋಡಿಕೊಂಡ ಬಿಎಂಟಿಸಿ ನಿರ್ವಾಹಕ ಅಬೂಬಕರ್ ಸಿದ್ದಿಕ್...ಅರ್ಥಗರ್ಭಿತ ಹಾಡು ನೀವೂ ಕೇಳಿ - ಬಳ್ಳಾರಿಯ ಸಂಡೂರು ತಾಲೂಕಿನ ಎಂ.ತುಂಬರಗುದ್ದಿ ಗ್ರಾಮದ ಪ್ರತಿಭೆ ಅಬೂಬಕರ್ ಸಿದ್ದಿಕ್
🎬 Watch Now: Feature Video

ಬಳ್ಳಾರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂದು ಬೆಂಗಳೂರಿನ ಶಾಂತಿನಗರದ ಬಿಎಂಟಿಸಿಯ 3ನೇ ಘಟಕದ ನಿರ್ವಾಹಕ ಮತ್ತು ಬಳ್ಳಾರಿಯ ಸಂಡೂರು ತಾಲೂಕಿನ ಎಂ.ತುಂಬರಗುದ್ದಿ ಗ್ರಾಮದ ಪ್ರತಿಭೆ ಅಬೂಬಕರ್ ಸಿದ್ದಿಕ್ ಅವರು ಹಾಡಿನ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಹಾಡಿನ ಪ್ರತಿಯೊಂದು ಸಾಲಿನಲ್ಲೂ ಕೆಎಸ್ಆರ್ಟಿಸಿ ನೌಕರರ ವೃತ್ತಿ ಬದುಕಿನ ಸಮಸ್ಯೆಗಳು ಎದ್ದುಕಾಣುತ್ತವೆ. ಸಿದ್ದಿಕ್ ಅವರು ಜಾನಪದ ಗೀತೆಗಳು, ದೇಶ ಭಕ್ತಿಗೀತೆಗಳು, ಭಕ್ತಿಗೀತೆಗಳು ಮತ್ತು ಸಿನಿಮಾ ಹಾಡುಗಳನ್ನು ಹಾಡುತ್ತಾರೆ. ಮುಖ್ಯವಾಗಿ ಹೆಣ್ಣಿನ ಧ್ವನಿಯಲ್ಲೂ ಹಾಡುವ ಸಾಮರ್ಥ್ಯ ಹೊಂದಿದ್ದಾರೆ.