4 ದಿನಗಳಿಂದ ಮರದಲ್ಲೇ ಬೀಡುಬಿಟ್ಟ ಕಾಳಿಂಗ ಸರ್ಪ: ರಕ್ಷಿಸಿ ಕಾಡಿಗೆ ಬಿಟ್ಟ ಉರಗ ತಜ್ಞ
🎬 Watch Now: Feature Video
ಶಿರಸಿ: ಕಳೆದ ನಾಲ್ಕು ದಿನದಿಂದ ತೋಟದ ಮರದಲ್ಲೇ ಬೀಡುಬಿಟ್ಟಿದ್ದ 14 ಅಡಿ ಉದ್ದದ ಕಾಳಿಂಗಸರ್ಪವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ. ಈ ಘಟನೆ ಶಿರಸಿ ತಾಲೂಕಿನ ರಾಗಿಹೊಸಳ್ಳಿಯಲ್ಲಿ ನಡೆದಿದೆ. ಶಿರಸಿ-ಕುಮಟಾ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಇರುವ ತೋಟದಲ್ಲಿ ಕಾಳಿಂಗ ಸರ್ಪವು ಕಳೆದ 4 ದಿನದಿಂದ ಮರದಲ್ಲೇ ಇದ್ದು, ಸ್ಥಳೀಯರಿಗೆ ಕೃಷಿ ಚಟುವಟಿಕೆ ಮಾಡಲು ಭಯ ಹುಟ್ಟಿಸಿತ್ತು. ತೋಟದ ಕೆಲಸಕ್ಕೆ ತೆರಳಲು ಸಾಧ್ಯವಾಗದೇ ರೈತರು ಮನೆಯಲ್ಲಿಯೇ ಕುಳಿತಿದ್ದರು. ನಂತರ ಸ್ಥಳೀಯರ ಮಾಹಿತಿ ಆಧಾರದಲ್ಲಿ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಪವನ್, 9.2 ಕೆ.ಜಿ ತೂಕದ 14 ಅಡಿ ಉದ್ದದ ಕಾಳಿಂಗವನ್ನು ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.