ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು: ಸಂತಸ ಹಂಚಿಕೊಂಡ ಪೂಜಾರ, ಸುಂದರ್, ಸಿರಾಜ್ ಕುಟುಂಬ - ಭಾರತ -ಆಸ್ಟ್ರೇಲಿಯಾ ಕ್ರಿಕೆಟ್
🎬 Watch Now: Feature Video
ಹೈದರಾಬಾದ್: ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಬಾರ್ಡರ್ ಗವಾಸ್ಕರ್ ಸರಣಿ ಕೈವಶ ಮಾಡಿಕೊಂಡಿದೆ. ಇನ್ನು ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನ ತೋರಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮನೆಯ ಬಳಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ವಾಷಿಂಗ್ಟನ್ ಸುಂದರ್ ಅವರ ಸಹೋದರಿ ಶೈಲಜಾ ಸುಂದರ್ ಮಾತನಾಡಿ, "ಆತನ ಪರಿಶ್ರಮ ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡಿತು" ಎಂದು ಹೇಳಿದ್ದರೆ. ಇನ್ನು ಮೊಹಮ್ಮದ್ ಸಿರಾಜ್ ಅವರ ಕುಟುಂಬವೂ ಸಂತಸ ವ್ಯಕ್ತಪಡಿಸಿದೆ. ಭಾರತದ ಟೆಸ್ಟ್ ದಿಗ್ಗಜ ಚೇತೇಶ್ವರ ಪೂಜಾರ ಅವರ ಕುಟುಂಬವೂ ಈ ಗೆಲುವನ್ನು ಶ್ಲಾಘಿಸಿದೆ. ಪೂಜಾರ ತಂದೆ, “ಇದು ನಮಗೆ ವಿಶೇಷ ಗೆಲುವು. ರಹಾನೆ ಮತ್ತು ಚೇತೇಶ್ವರ ಇಬ್ಬರು ಸರಣಿಯಲ್ಲಿ ಎಲ್ಲಾ ಟೆಸ್ಟ್ ಪಂದ್ಯಗಳನ್ನು ಆಡಿದ ಇಬ್ಬರು ಆಟಗಾರರು. ಅನೇಕ ವೇಗಿಗಳು ಮತ್ತು ಸ್ಪಿನ್ನರ್‌ಗಳು ಒಂದರ ನಂತರ ಒಬ್ಬರು ಗಾಯಗೊಂಡರು. ಈ ಗೆಲುವು ನಮ್ಮ ತಂಡದ ಸ್ಥೈರ್ಯ ಹೆಚ್ಚಿಸಿದೆ ” ಎಂದರು.